ಕರ್ನಾಟಕ

karnataka

ETV Bharat / state

ಬಸವಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುವುದನ್ನ ನಿಲ್ಲಿಸಬೇಕು : ಕೆ ಸಿ‌ ಪುಟ್ಟಸಿದ್ಧಶೆಟ್ಟಿ

ಹುಬ್ಬಳ್ಳಿಯಲ್ಲಿ ಅಕ್ಟೋಬರ್ 15 ರಂದು ಸಭೆ ಆಯೋಜನೆ ಮಾಡಲಾಗಿದೆ. ಪಂಚಮಸಾಲಿ ಸಮಾಜವನ್ನ 2 ಎ ಗೆ ಸೇರಿಸಬಾರದು ಎಂದು ಬೊಮ್ಮಾಯಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಿದ್ದೇವೆ ಎಂದು ಕಾಯಕ‌ ಸಮಾಜ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಸಿ.ಪುಟ್ಟಸಿದ್ಧಶೆಟ್ಟಿ ಹೇಳಿದರು.

Etv Bharatopposition-to-2a-reservation-for-panchmasali-community-in-hubli
Etv Bharat ಕೆ ಸಿ‌ ಪುಟ್ಟಸಿದ್ಧಶೆಟ್ಟಿ

By

Published : Oct 10, 2022, 8:58 PM IST

ಹುಬ್ಬಳ್ಳಿ :ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕೊಡಬಾರದು. ಪಂಚಮಸಾಲಿ ಸಮುದಾಯ ಆರ್ಥಿಕವಾಗಿ ಮುಂದುವರಿದ ಸಮಾಜ. ವೀರಶೈವ ಸಮಾಜದ ಒಂದು ಪಂಗಡ. ಪಂಚಮಸಾಲಿ ಸಮುದಾಯವನ್ನು ಪ್ರತ್ಯೇಕ ಜಾತಿ ಎಂದು ಪರಿಗಣಿಸಲು ಆಗುವುದಿಲ್ಲ. ಬಸವಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುವುದನ್ನು ನಿಲ್ಲಿಸಬೇಕು ಎಂದು ಕಾಯಕ‌ ಸಮಾಜ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಸಿ.ಪುಟ್ಟಸಿದ್ಧಶೆಟ್ಟಿ ಒತ್ತಾಯಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾಮೀಜಿ ಬಸವ ತತ್ತ್ವದ ವಿರುದ್ಧ ಕಾಯಕ ಸಮಾಜವನ್ನು ಅವಮಾನಿಸುವ ಕೆಲಸ ಮಾಡಬಾರದು. ಬಸವಣ್ಣನವರ ಹೆಸರಿನ ಪೀಠದಲ್ಲಿ ಇವರು ಇರಲು ಯೋಗ್ಯರಲ್ಲ. ಇವರ ವರ್ತನೆ ಸ್ವಾಮೀಜಿಗಳ ರೀತಿ ಇಲ್ಲ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಹರಿಹಾಯ್ದರು.

ಬಸವಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುವುದನ್ನ ನಿಲ್ಲಿಸಬೇಕು

ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿ.ಸಿ ಪಾಟೀಲ್ ಒಂದು ಜಾತಿಯ ಪರವಾಗಿ ಮಾತನಾಡುವುದನ್ನ ನಿಲ್ಲಿಸಬೇಕು. ಕಾಯಕ‌ ಸಮಾಜಗಳ ಒಕ್ಕೂಟದಿಂದ ಈ ವಿಚಾರವಾಗಿ ಚಿಂತನ ಮಂಥನ ಆಯೋಜನೆ ಮಾಡಲಾಗಿದೆ. ಈ ಬಗ್ಗೆ ಕಾಯಕ ಸಮಾಜಗಳ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಸಲಿದ್ದೇವೆ.

ಹುಬ್ಬಳ್ಳಿಯಲ್ಲಿ ಅಕ್ಟೋಬರ್ 15 ರಂದು ಸಭೆ ಆಯೋಜನೆ ಮಾಡಲಾಗಿದೆ. ಪಂಚಮಸಾಲಿ ಸಮಾಜವನ್ನ 2ಎಗೆ ಸೇರಿಸಬಾರದು ಎಂದು ಬೊಮ್ಮಾಯಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಿದ್ದೇವೆ ಎಂದರು.

ಇದನ್ನೂ ಓದಿ :ಪಂಚಮಸಾಲಿ 2ಎ ಮೀಸಲಾತಿ ಹೋರಾಟ: ಸಿಎಂಗೆ ಗಡುವು ನೆನಪಿಸಿದ ಪಂಚಮಸಾಲಿಪೀಠ ಶ್ರೀ

ABOUT THE AUTHOR

...view details