ಧಾರವಾಡ: ಫೆ.14 ರಂದು ಆಚರಣೆ ಮಾಡುವ ಪ್ರೇಮಿಗಳ ದಿನಕ್ಕೆ ಈ ಬಾರಿಯೂ ಧಾರವಾಡದಲ್ಲಿ ಶ್ರೀರಾಮಸೇನೆ ವಿರೋಧ ವ್ಯಕ್ತಪಡಿಸಿದೆ.
ಪ್ರೇಮಿಗಳ ದಿನಕ್ಕೆ ಶ್ರೀರಾಮಸೇನೆ ವಿರೋಧ: ಗಂಗಾಧರ ಕುಲಕರ್ಣಿ ಹೇಳಿಕೆ - ಶ್ರೀರಾಮಸೇನಾ ರಾಜ್ಯ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಹೇಳಿಕೆ
ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ಪುಂಡಾಟಿಕೆ ನಡೆಸುತ್ತಾರೆ ಎಂಬ ಉದ್ದೇಶದಿಂದಾಗಿ ಪ್ರೇಮಿಗಳ ದಿನಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಹೇಳಿಕೆ ನೀಡಿದ್ದಾರೆ.
ಈ ಕುರಿತು ಶ್ರೀರಾಮಸೇನಾ ರಾಜ್ಯ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಹೇಳಿಕೆ ನೀಡಿದ್ದು, ಪ್ರೇಮಿಗಳಿಗೆ ಹಾಗೂ ಪ್ರೇಮಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಪ್ರೇಮಿಗಳ ದಿನದ ನ ನೆಪವಿಟ್ಟುಕೊಂಡು ಸಾರ್ವಜನಿಕ ಸ್ಥಳದಲ್ಲಿ ಬೇಕಾಬಿಟ್ಟಿ ಪುಂಡಾಟಿಕೆ ಮಾಡಿದರೆ ಅಂತಹವರಿಗೆ ಬಿಸಿ ಮುಟ್ಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರೇಮಿಗಳ ದಿನಾಚರಣೆಗೆ ಕೇಂದ್ರ ಸರ್ಕಾರ 1 ಲಕ್ಷ ಹಾಗೂ ರಾಜ್ಯ ಸರ್ಕಾರ 50 ಸಾವಿರ ರೂ. ನೀಡಬೇಕು ಎಂಬ ವಾಟಾಳ್ ನಾಗರಾಜ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಯಾವ ಪುರುಷಾರ್ಥಕ್ಕಾಗಿ ಪ್ರೇಮಿಗಳಿಗೆ ಇಷ್ಟೆಲ್ಲ ಸೌಲಭ್ಯ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.