ಕರ್ನಾಟಕ

karnataka

By

Published : Jul 21, 2019, 1:51 PM IST

ETV Bharat / state

ಬಿಜೆಪಿ ಶಾಸಕರ 'ಆಪರೇಷನ್' ಸಿಎಂಗೆ ದೊಡ್ಡ ವಿಚಾರವಲ್ಲ: ಕೋನರೆಡ್ಡಿ ಎಚ್ಚರಿಕೆ

ಶಾಸಕರು ಬೇರೆ ರಾಜ್ಯದಲ್ಲಿದ್ದು ಈ ರೀತಿ ಮಾಡುತ್ತಿರುವುದು ರಾಜ್ಯಕ್ಕೆ ಶೋಭೆ ತರಲ್ಲ. ಸಿಎಂ ಕುರ್ಚಿ ಉಳಿಸಿಕೊಳ್ಳಲು ಈ ರೀತಿ ಮಾಡುತ್ತಿಲ್ಲ, ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಲು ಹೋರಾಟ ನಡೆಸಿದ್ದಾರೆ ಎಂದರು.

ಎನ್.ಎಚ್. ಕೋನರೆಡ್ಡಿ

ಧಾರವಾಡ:ಅತೃಪ್ತ ಶಾಸಕರಿಗೆ ವಿಪ್ ಜಾರಿ ಸಂಬಂಧಿಸಿದಂತೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್.ಹೆಚ್‌ ಕೋನರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆದಿದ್ದು, ನಾಳೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ವಿಧಾನಸಭೆಯಲ್ಲಿ 20ಕ್ಕೂ ಹೆಚ್ಚು ಶಾಸಕರ ಚರ್ಚೆ ಬಾಕಿ ಇದೆ. ಎಲ್ಲಾ ಚರ್ಚೆ ಮುಗಿದ ಬಳಿಕ ಏನು ತೀರ್ಮಾನ ಮಾಡಬೇಕು ಎಂಬುದನ್ನು ನಿರ್ಣಯಿಸಲಾಗುತ್ತದೆ ಎಂದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎನ್ ಹೆಚ್‌ ಕೋನರೆಡ್ಡಿ ಹೇಳಿಕೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯನ್ನು ದೇವಸ್ಥಾನ ಎಂದು ಭಾವಿಸಿ ವಿಧಾನಸೌಧಕ್ಕೆ ಹೋದವರು ನಾವು. ಇಂದಿನ ಪರಿಸ್ಥಿತಿ ನೋಡಿದ್ರೇ ಉತ್ತರ ಹೇಳೋದು ಕಷ್ಟಕರವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ರು.
ಇದೇ ವೇಳೆ, ಅತೃಪ್ತರ ಬಗ್ಗೆ ಮಾತನಾಡಿದ ಅವರು, ಶಾಸಕರು ಬೇರೆ ರಾಜ್ಯದಲ್ಲಿದ್ದು ಈ ರೀತಿ ಮಾಡುತ್ತಿರುವುದು ರಾಜ್ಯಕ್ಕೆ ಶೋಭೆ ತರಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ಶಾಸಕರ ಕುದುರೆ ವ್ಯಾಪಾರದ ಬಗ್ಗೆ ವಿಧಾನಸೌಧದಲ್ಲಿ ಚರ್ಚೆಯಾಗಿದ್ದು, ಈ ಬೆಳವಣಿಗೆಯಿಂದ ತಲೆ ತಗ್ಗಿಸುವಂತಾಗಿದೆ. ಈ ವ್ಯವಸ್ಥೆ ನೋಡಿದ್ರೆ, ರಾಜಕಾರಣ ಕಮರ್ಷಿಯಲ್ ಆಗುವ ಆತಂಕವಿದೆ. ಬಿಜೆಪಿ ಶಾಸಕರನ್ನು 'ಆಪರೇಷನ್' ಮಾಡುವುದು ಕುಮಾರಸ್ವಾಮಿ ಅವರಿಗೆ ದೊಡ್ಡ ವಿಚಾರವಲ್ಲ ಎಂದು ಎಚ್ಚರಿಸಿದರು.

For All Latest Updates

TAGGED:

ABOUT THE AUTHOR

...view details