ಕರ್ನಾಟಕ

karnataka

ETV Bharat / state

SDM ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಪ್ರಯೋಗಾಲಯ ಉದ್ಘಾಟನೆ - Covid Laboratory at SDM Medical College

ಈಗ ಪ್ರತಿನಿತ್ಯ ಭಾರತದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಹೊರದೇಶಗಳಿಗೆ ರಫ್ತು ಮಾಡುವ ಸಾಮರ್ಥ್ಯ ಗಳಿಸಿಕೊಂಡಿದ್ದೇವೆ. ಕೋವಿಡ್ ಭಯಾನಕ ಖಾಯಿಲೆಯಲ್ಲ. ಕಳೆದ ಹತ್ತು ವರ್ಷಗಳಿಂದ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಹುಬ್ಬಳ್ಳಿಯ ವ್ಯಕ್ತಿಯೊಬ್ಬರು ತಮ್ಮ ಆತ್ಮವಿಶ್ವಾಸದಿಂದ ಕೋವಿಡ್​ನಿಂದಲೂ ಗುಣಮುಖರಾಗಿರುವುದನ್ನು ಗಮನಿಸಿದಾಗ ಸಾರ್ವಜನಿಕರ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ತಿಳಿಸಿದರು.

By

Published : Jul 17, 2020, 9:36 PM IST

ಧಾರವಾಡ: ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಪ್ರಯತ್ನಗಳೊಂದಿಗೆ ಖಾಸಗಿ ಆಸ್ಪತ್ರೆಗಳು ಮತ್ತು ಸಾರ್ವಜನಿಕರ ಸಹಕಾರವೂ ಮುಖ್ಯ. ಲಾಕ್​ಡೌನ್​ಗಿಂತ ಸ್ವಯಂ ನಿರ್ಬಂಧ ಹೆಚ್ಚು ಪರಿಣಾಮಕಾರಿಯಾದುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಎಸ್​ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಪ್ರಯೋಗಾಲಯ

ಸತ್ತೂರಿನ ಎಸ್​ಡಿಎಂ ಆಸ್ಪತ್ರೆಯಲ್ಲಿ ಸಂಜೆ ಕೋವಿಡ್ ತಪಾಸಣೆ ವೈರಾಲಜಿ ಪ್ರಯೋಗಾಲಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೋವಿಡ್ ಸೋಂಕಿತರ ತ್ವರಿತ ಪತ್ತೆಗೆ ಮತ್ತೊಂದು ಪ್ರಯೋಗಾಲಯ ಪ್ರಾರಂಭವಾಗುತ್ತಿರುವುದು ನೆರವಾಗಲಿದೆ. ಕೊರೊನಾ ವಾರಿಯರ್​ಗಳಾಗಿರುವ ವೈದ್ಯರು ನರ್ಸ್​ಗಳ ಸೇವೆ ಅನನ್ಯವಾದುದು. ಕೋವಿಡ್ ಬಗ್ಗೆ ಮಾಧ್ಯಮಗಳು ಭಯ ಸೃಷ್ಟಿಸದೇ, ಜಾಗೃತಿ ಮೂಡಿಸಬೇಕು. ಶೇ.64 ರಷ್ಟು ಜನ ಗುಣಮುಖರಾಗಿ ಬಿಡುಗಡೆಯಾಗುತ್ತಿದ್ದಾರೆ ಎಂದರು.

ಕೋವಿಡ್ ತಡೆಗೆ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ತ್ವರಿತವಾಗಿ ಕಾರ್ಯೋನ್ಮುಖರಾದ ಪರಿಣಾಮ ಇಂದು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತಿದೆ. ಜನರ ಅಭಿಪ್ರಾಯ ಆಧರಿಸಿ ಜಿಲ್ಲೆಯಲ್ಲಿ ಹತ್ತು ದಿನಗಳ ಲಾಕ್​ಡೌನ್ ಜಾರಿಯಲ್ಲಿದೆ. ಪ್ರತಿಯೊಬ್ಬರೂ ಸ್ವಯಂ ನಿರ್ಬಂಧ ಹಾಕಿಕೊಂಡು ಕೊರೊನಾ ತಡೆಯಲು ಕೈ ಜೋಡಿಸಬೇಕು ಎಂದು ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಾಗಿ

ಆನ್​ಲೈನ್ ಗೂಗಲ್ ಮೀಟ್ ಮೂಲಕ ಕಾರ್ಯಕ್ರಮ ಉದ್ದೇಶಿಸಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಮಾತನಾಡಿ, ಈ ವಿಷಮ ಪರಿಸ್ಥಿತಿ ಎದುರಿಸಿ ಜಯಿಸಬೇಕಾಗಿದೆ. ಸೋಂಕಿನ ಸರಪಳಿ ತುಂಡರಿಸಲು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಜೊತೆಗೆ ಹೆಚ್ಚು ಪರೀಕ್ಷೆಗಳು ಆಗಬೇಕು. ನಮ್ಮ ದೇಶದ ಜನಸಂಖ್ಯೆ, ಜನಸಾಂದ್ರತೆಗೆ ಹೋಲಿಸಿದಾಗ ಕೋವಿಡ್ ನಿಯಂತ್ರಣದಲ್ಲಿ ಪ್ರಧಾನ ಮಂತ್ರಿಗಳ ದೂರದೃಷ್ಟಿಯುಳ್ಳ ಕ್ರಮಗಳು ಉತ್ತಮ ಪರಿಣಾಮ ನೀಡುತ್ತಿವೆ. ದೇಶದಲ್ಲಿ ಕಳೆದ ಜನವರಿ 1 ರ ಹೊತ್ತಿಗೆ ಪಿಪಿಇ ಕಿಟ್, ಎನ್-95 ಮಾಸ್ಕ್​ಗಳ ಲಭ್ಯತೆ ವಿರಳವಾಗಿತ್ತು. ಈಗ ಪ್ರತಿನಿತ್ಯ ಭಾರತದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಹೊರದೇಶಗಳಿಗೆ ರಫ್ತು ಮಾಡುವ ಸಾಮರ್ಥ್ಯ ಗಳಿಸಿಕೊಂಡಿದ್ದೇವೆ. ಕೋವಿಡ್ ಭಯಾನಕ ಖಾಯಿಲೆಯಲ್ಲ. ಕಳೆದ ಹತ್ತು ವರ್ಷಗಳಿಂದ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಹುಬ್ಬಳ್ಳಿಯ ವ್ಯಕ್ತಿಯೊಬ್ಬರು ತಮ್ಮ ಆತ್ಮವಿಶ್ವಾಸದಿಂದ ಕೋವಿಡ್​ನಿಂದಲೂ ಗುಣಮುಖರಾಗಿರುವುದನ್ನು ಗಮನಿಸಿದಾಗ ಸಾರ್ವಜನಿಕರ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ತಿಳಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಭಾಗಿ

ಗೂಗಲ್ ಮೀಟ್ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಎಸ್​ಡಿಎಂ ಅಧಿಕಾರಿಗಳು ಭಾಗವಹಿಸಿದ್ದರು.

ABOUT THE AUTHOR

...view details