ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಕೆಎಲ್ಇ ಸಂಸ್ಥೆಯ ಸುಚಿರಾಯು ಆಸ್ಪತ್ರೆಯ ವೈದ್ಯರಾದ ಡಾ.ಶರಣ ಹಳ್ಳದ ಸುಮಾರು 1000 ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.
ಸಾವಿರ ಹೃದಯ ಶಸ್ತ್ರಚಿಕಿತ್ಸೆ ಸರದಾರ: ಸುಚಿರಾಯು ಆಸ್ಪತ್ರೆಯ ಡಾ.ಶರಣ ಹಳ್ಳದ - Dr.Sharana hallada
ಉತ್ತರ ಕರ್ನಾಟಕ ಭಾಗದಲ್ಲಿ ಅಲ್ಪಾವಧಿಯಲ್ಲಿ 1000ಕ್ಕೂ ಹೆಚ್ಚು ಓಪನ್ ಹಾರ್ಟ್ ಸರ್ಜರಿ ಮಾಡಿದ ಗೌರವವನ್ನು ಸುಚಿರಾಯು ಆಸ್ಪತ್ರೆಯ ಡಾ.ಶರಣ ಹಳ್ಳದ ತಮ್ಮದಾಗಿಸಿಕೊಂಡಿದ್ದಾರೆ.
ಡಾ.ಶರಣ ಹಳ್ಳದ ಸಾವಿರ ಓಪನ್ ಹಾರ್ಟ್ ಸರ್ಜರಿ ಮಾಡಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಅಲ್ಪಾವಧಿಯಲ್ಲಿ ಹೆಚ್ಚು ಓಪನ್ ಹಾರ್ಟ್ ಸರ್ಜರಿ ಮಾಡಿದ ಗೌರವವನ್ನು ತಮ್ಮದಾಗಿಸಿಕೊಂಡಿದ್ದಾರೆ. ಉತ್ತಮ ಗುಣಮಟ್ಟದ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು, ಮುಂಬೈ, ಚೆನ್ನೈ ಹಾಗೂ ಇತರ ದೂರದ ನಗರಗಳಿಗೆ ಹೋಗಬೇಕೆಂಬ ಅನಿವಾರ್ಯತೆಯನ್ನು ಕೆಎಲ್ಇ-ಸುಚಿರಾಯು ಆಸ್ಪತ್ರೆಯ ವೈದ್ಯ ಡಾ.ಶರಣ ಹಳ್ಳದ ಈ ಭಾಗದ ಜನರಿಗೆ ದೂರ ಮಾಡಿದ್ದಾರೆ.
ಓಪನ್ ಹಾರ್ಟ್ ಸರ್ಜರಿಗಳಲ್ಲಿ ಮುಖ್ಯವಾಗಿ ಮಲ್ಟಿ ವೇಸ್ಸಲ್ ಬೈಪಾಸ್ ಸರ್ಜರಿ, ಹೃದಯ ಕವಾಟ ಬದಲಾವಣೆ, ಕಂಜೈನೆಂಟಲ್ ಹೃದಯ ರೋಗಗಳು,ಅನುರಿಸಮ್ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಹೊಸ ತಂತ್ರಜ್ಞಾನಗಳು, ಹೃದಯರೋಗಗಳಿಗೆ ಹೊಸ ಆಶಾಕಿರಣವನ್ನು ಡಾ.ಶರಣ ಹಳ್ಳದ ಮೂಡಿಸಿದ್ದಾರೆ.