ಹುಬ್ಬಳ್ಳಿ:ಮಕ್ಕಳಿಗೆ ಪಠ್ಯದ ಜೊತೆಗೆ ಆರೋಗ್ಯ ವೃದ್ಧಿಗೂ ಹೆಚ್ಚು ಒತ್ತು ನೀಡುವ ಸಲುವಾಗಿ ಶಾಲೆಗಳ ಆವರಣದಲ್ಲಿ ಓಪನ್ ಜಿಮ್ ಉಪಕರಣಗಳನ್ನು ಕೇಂದ್ರೀಯ ವಿದ್ಯಾಲಯ ಅಳವಡಿಸಿದೆ. ಈ ನಡೆ ಪಾಲಕರ ಮೊಗದಲ್ಲಿ ಸಂತಸ ತರಿಸಿದೆ.
ರಾಜನಗರದ ಕೇಂದ್ರೀಯ ವಿದ್ಯಾಲಯ ಸೇರಿದಂತೆ ರಾಜ್ಯದಲ್ಲಿ ಪ್ರಾದೇಶಿಕ ವಿಭಾಗದ 15 ಶಾಲೆಗಳಲ್ಲಿ ಓಪನ್ ಜಿಮ್ ಉಪಕರಣಗಳನ್ನು ಅಳವಡಿಸಲಾಗಿದೆ.
ಜಿಮ್ ಉಪಕರಣಗಳನ್ನು ಪೂರೈಸಲು ಮಹಾರಾಷ್ಟ್ರದ ನಾಸಿಕ್ ಸ್ಬಾನ್ಸನ್ನ ಇಂಡಸ್ಟ್ರೀಸ್ ಪ್ರೈವೇಟ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಕೇಂದ್ರ ಸರ್ಕಾರ ದೇಶಾದ್ಯಂತ 310 ಕೇಂದ್ರೀಯ ವಿದ್ಯಾಲಯಗಳಲ್ಲಿ ಓಪನ್ ಜಿಮ್ ಅಳವಡಿಸಲು ಆದೇಶಿಸಿದೆ.
ಓಪನ್ ಜಿಮ್ ಕುರಿತು ಅಭಿಪ್ರಾಯ ಕೇಂದ್ರೀಯ ವಿದ್ಯಾಲಯ ಸಂಘಟನೆ ತಮ್ಮ ಅಡಿ ಬರುವ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಒಟ್ಟು ಮೂರು ಕೇಂದ್ರೀಯ ವಿದ್ಯಾಲಯದಲ್ಲಿ ಜಿಮ್ ವ್ಯವಸ್ಥೆ ಮಾಡಿದೆ.
ಮಕ್ಕಳಿಗಾಗಿ ವಿಶೇಷವಾಗಿ ಕ್ರಾಸ್ ಟ್ರೈನರ್, ಸಿಟ್ ಅಪ್ ಬೊರ್ಡ್ ಡಬಲ್, ಚೆಸ್ ಕಮ್ ಸಿಟೆಡ್ ಪುಲ್ಲರ್, ರೋವರ್, ಲೆಗ್ ಪ್ರೇಸ್ ಇತರ ಉಪಕರಣಗಳನ್ನು ಅಳವಡಿಸಲಾಗಿದೆ.