ಹುಬ್ಬಳ್ಳಿ: ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ವತಿಯಿಂದ ಹೊಸ ವರ್ಷಾಚರಣೆ ನಿಮಿತ್ತ ಜ.1ರಿಂದ 30ರ ವರೆಗೆ 'ಬೇಡ ಮದ್ಯಪಾನ-ಮಾಡು ಯೋಗ ಧ್ಯಾನ' ವಿಶೇಷ ಆನ್ಲೈನ್ ಯೋಗ ಶಿಬಿರವನ್ನ ಆಯೋಜಿಸಲಾಗಿದೆ ಎಂದು ಪತಂಜಲಿ ಯೋಗ ಪೀಠದ ಕರ್ನಾಟಕ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಹೇಳಿದರು.
'ಬೇಡ ಮದ್ಯಪಾನ-ಮಾಡು ಯೋಗ ಧ್ಯಾನ' : ಹುಬ್ಬಳ್ಳಿಯಲ್ಲಿ ವಿಶೇಷ ಆನ್ಲೈನ್ ಯೋಗ ಶಿಬಿರ - online Yoga Campaign
ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ವತಿಯಿಂದ ಹೊಸ ವರ್ಷಾಚರಣೆ ನಿಮಿತ್ತ ಜ.1ರಿಂದ 30ರ ವರೆಗೆ 'ಬೇಡ ಮದ್ಯಪಾನ-ಮಾಡು ಯೋಗ ಧ್ಯಾನ' ವಿಶೇಷ ಆನ್ಲೈನ್ ಯೋಗ ಶಿಬಿರವನ್ನ ಆಯೋಜಿಸಲಾಗಿದೆ.
!['ಬೇಡ ಮದ್ಯಪಾನ-ಮಾಡು ಯೋಗ ಧ್ಯಾನ' : ಹುಬ್ಬಳ್ಳಿಯಲ್ಲಿ ವಿಶೇಷ ಆನ್ಲೈನ್ ಯೋಗ ಶಿಬಿರ online Yoga Campaign](https://etvbharatimages.akamaized.net/etvbharat/prod-images/768-512-9988899-thumbnail-3x2-net.jpg)
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಟ್ಟು, ಸ್ವದೇಶಿ ಯೋಗ, ಪ್ರಾಣಾಯಾಮ, ಧ್ಯಾನ ಹಾಗೂ ಅಗ್ನಿ ಹೋತ್ರ ಇವುಗಳನ್ನು ಜೀವನದಲ್ಲಿ ಸಮರ್ಪಕವಾಗಿ ಅಳವಡಿಸಿಕೊಂಡು ನೆಮ್ಮದಿಯ ಜೀವನದ ಜೊತೆ ಸ್ವಾಸ್ಥ್ಯ ಸಮಾಜ ನಿರ್ಮಾಣದ ಉದ್ದೇಶದಿಂದ ಈ ಯೋಗ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಈ ಯೋಗ ಶಿಬಿರದಲ್ಲಿ ಪತಂಜಲಿ ಯೋಗ ಪೀಠ ಹರಿದ್ವಾರದ ಯೋಗ ಖುಷಿ ಸ್ವಾಮಿ ರಾಮದೇವ್ ಬಾಬಾ, ಕೇಂದ್ರೀಯ ಪ್ರಭಾರಿ ಸಾಧ್ವಿ ದೇವಪ್ರಿಯ ಸೇರಿದಂತೆ 50ಕ್ಕೂ ಹೆಚ್ಚು ಯೋಗ ಪರಿಣಿತರು ಉಚಿತ ತರಬೇತಿ ನೀಡಲಿದ್ದಾರೆ. ಶಿಬಿರದಲ್ಲಿ 8-80 ವರ್ಷದ ವಯೋಮಾನದವರು ಭಾಗವಹಿಸಬಹುದಾಗಿದ್ದು, ತರಬೇತಿ ಸಂಪೂರ್ಣ ಉಚಿತವಾಗಿದೆ ಎಂದು ತಿಳಿಸಿದರು.