ಹುಬ್ಬಳ್ಳಿ:ಕೇಂದ್ರ ಸರ್ಕಾರ ತಕ್ಷಣದಿಂದಲೇ ಜಾರಿಯಾಗುವಂತೆ ಈರುಳ್ಳಿ ರಫ್ತು ನಿಷೇಧ ಮಾಡಿರುವುದನ್ನು ಹುಬ್ಬಳ್ಳಿ ಭಾಗದ ರೈತರು ಖಂಡಿಸಿದ್ದಾರೆ.
ಈರುಳ್ಳಿ ರಫ್ತು ನಿಷೇಧ ಖಂಡನೀಯ, ಕೇಂದ್ರ ಸರ್ಕಾರದ ವಿರುದ್ಧ ಹುಬ್ಬಳ್ಳಿ ಭಾಗದ ರೈತರ ಅಸಮಾಧಾನ - ಹುಬ್ಬಳ್ಳಿ ರೈತರು
ಈರುಳ್ಳಿ ರಫ್ತು ನಿಷೇಧ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಹುಬ್ಬಳ್ಳಿ ಭಾಗದ ರೈತರು ಖಂಡಿಸಿದ್ದಾರೆ.
ಈರುಳ್ಳಿ
ಕೇಂದ್ರ ಸರ್ಕಾರದ ತಗೆದುಕೊಂಡು ಈ ನಿರ್ಧಾರ ರೈತ ವಿರೋಧಿಯಾಗಿದೆ. ಅಲ್ಲದೇ ಸಾಕಷ್ಟು ರೈತರು ಸಂಕಷ್ಟದ ನಡುವೇ ಈರುಳ್ಳಿ ಬೆಳೆದಿದ್ದಾರೆ. ಉತ್ತಮ ಮಳೆಯಾಗಿ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಕೇಂದ್ರ ಸರ್ಕಾರ ಆಘಾತವನ್ನುಂಟು ಮಾಡಿದೆ ಎಂದರು.
ಗ್ರಾಹಕರ ಹಿತದೃಷ್ಟಿಯಿಂದ ರಫ್ತು ನಿಷೇಧ ಮಾಡಿದ್ದರೆ, ಕೂಡಲೇ ಕೇಂದ್ರ ಸರ್ಕಾರ ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಹಾಗೂ ಖರೀದಿ ಕೇಂದ್ರ ಆರಂಭಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.