ಕರ್ನಾಟಕ

karnataka

ETV Bharat / state

ಅಣ್ಣ ಪಕ್ಷೇತರ, ತಂಗಿ ಕಾಂಗ್ರೆಸ್, ಅಜ್ಜನದು ಬಿಜೆಪಿ.. ಒಂದೇ ಕುಟುಂಬದ ಮೂವರು ಹು-ಧಾ ಪಾಲಿಕೆಗೆ ಪ್ರವೇಶ.. - ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ

ಒಂದೇ ಕುಟುಂಬದ ಮೂವರು ಅಭ್ಯರ್ಥಿಗಳು ವಿವಿಧ ಪಕ್ಷದಿಂದ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಅಭೂತ ಪೂರ್ವ ಜಯಗಳಿಸುವ ಮೂಲಕ ಚುನಾಯಿತರಾಗಿ ಅಚ್ಚರಿಯ ಘಟನೆಗೆ ಹು-ಧಾ ಮಹಾನಗರ ಪಾಲಿಕೆ ಸಾಕ್ಷಿಯಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಚೇತನ್ ಹಿರೇಕೆರೂರು ಹಾಗೂ ಕಾಂಗ್ರೆಸ್​​ ಅಭ್ಯರ್ಥಿಯಾಗಿ ಅವರ ಸಹೋದರಿ, ಮತ್ತು ಬಿಜೆಪಿ ಅರ್ಭ್ಯರ್ಥಿಯಾಗಿ ಚೇತನ್​ ಅಜ್ಜ ಮೊದಲ ಬಾರಿಗೆ ಪಾಲಿಕೆ ಅಂಗಳಕ್ಕೆ ಕಾಲಿಟ್ಟಿದ್ದಾರೆ..

one-family-three-members-won-in-hubli-dharwad-corporation-election
ಹು-ಧಾ ಮಹಾನಗರ ಪಾಲಿಕೆ

By

Published : Sep 6, 2021, 8:52 PM IST

Updated : Sep 7, 2021, 12:16 PM IST

ಹುಬ್ಬಳ್ಳಿ :ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಂದೇ ಮನೆತನದ ಮೂವರು ಸಂಬಂಧಿಕರು ಬೇರೆ-ಬೇರೆ ಪಕ್ಷಗಳಿಂದ ಚುನಾಯಿತರಾಗುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.

ಕುತೂಹಲ ಮೂಡಿಸಿದ್ದ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂ. 52ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಚೇತನ್ ಹಿರೇಕೆರೂರ 314 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಚೇತನ್ ಹಿರೇಕೆರೂರ ಅವರ ಖಾಸಾ ಸಹೋದರಿ ಶೃತಿ ಚಲವಾದಿ ವಾರ್ಡ್ ನಂ. 58ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಮಹೇಂದ್ರ ಕೌತಾಳ್ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.

ಇತ್ತ, ಭಾರತೀಯ ಜನತಾ ಪಾರ್ಟಿ ಪಕ್ಷದಿಂದ ವಾರ್ಡ್ ನಂ.42ರಲ್ಲಿ ಸ್ಪರ್ಧಿಸಿದ್ದ ಚೇತನ್ ಹಿರೇಕೆರೂರ ಅವರ ಅಜ್ಜ ಮಹದೇವಪ್ಪ ನರಗುಂದ ಗೆಲುವು ಸಾಧಿಸಿದ್ದಾರೆ. ಈ ಮೂವರು ವಾರ್ಡ್ ವಿಂಗಡಣೆಯಾದ ನಂತರ ಮೊದಲು ಬಾರಿ ಪಾಲಿಕೆಗೆ ಪ್ರವೇಶ ಪಡೆಯುತ್ತಿದ್ದಾರೆ.

Last Updated : Sep 7, 2021, 12:16 PM IST

ABOUT THE AUTHOR

...view details