ಅಳ್ನಾವರ (ಧಾರವಾಡ): ಕೊರೊನಾ ಸೋಂಕು ಅಳ್ನಾವರಕ್ಕೂ ಕಾಲಿಟ್ಟಿದೆ. ಮಾನಕಾಪುರ ಬಡಾವಣೆಯ 41 ವರ್ಷದ ಮಹಿಳೆಗೆ ಸೋಂಕು ಪಸರಿಸಿದೆ ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವಾಯ್. ಜಿ. ಗದ್ದಿಗೌಡರ ತಿಳಿಸಿದ್ದಾರೆ.
ನಲ್ವತ್ತರ ಮಹಿಳೆಗೆ ಸೋಂಕು; ಮಾನಕಾಪುರ ಬಡಾವಣೆ ಸೀಲ್‌ಡೌನ್ - ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ
ಮಾನಕಾಪೂರ ಬಡಾವಣೆಯ ಮಹಿಳೆಗೆ ಕೊರೊನಾ ಸೋಂಕು ತಗುಲಿದ್ದು, ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಬಡಾವಣೆಯನ್ನು ಸೀಲ್‌ಡೌನ್ ಮಾಡಿದ್ದಾರೆ.

Alnavara
ಈ ಮಹಿಳೆ ಕಿಡ್ನಿಯಲ್ಲಿ ಕಲ್ಲಿದೆ ಎಂದು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಚಿಕಿತ್ಸೆಗಾಗಿ ಭಾನುವಾರ ತೆರಳಿದ್ದರು. ಅಲ್ಲಿನ ವೈದ್ಯರು ಕೋವಿಡ್ ಪರೀಕ್ಷೆ ಮಾಡಿಸಲು ಸೂಚಿಸಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದ್ದರು. ಇಂದು ವರದಿ ಬಂದಿದ್ದು, ಮಹಿಳೆಗೆ ಸೋಂಕು ಇರುವುದು ಗೊತ್ತಾಗಿದೆ.
ಮುಂಜಾಗ್ರತಾ ಕ್ರಮವಾಗಿ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮಾನಕಾಪೂರ ಬಡಾವಣೆಯನ್ನು ಸೀಲ್‌ಡೌನ್ ಮಾಡಿದ್ದಾರೆ.