ಕರ್ನಾಟಕ

karnataka

ETV Bharat / state

ಮೊಮ್ಮಕ್ಕಳಿಗಾಗಿ ಟಗರಿನ ಬಂಡಿ ತಯಾರಿಸಿದ ವೃದ್ಧ: ವಿಡಿಯೋ​ ವೈರಲ್​ - ಟಗರಿನ ಬಂಡಿ

ತಾಲೂಕಿನ ಬಣದೂರಿನ ರೈತ ತನ್ನ ಮೊಮ್ಮಕಳ ಖುಷಿಗಾಗಿ ಚಿಕ್ಕ ಬಂಡಿ ಮಾಡಿ ಅದಕ್ಕೆ ಟಗರುಗಳನ್ನು ಕಟ್ಟಿ, ಬಣದೂರಿಂದ ಗಳಗಿ ಹುಲಕೊಪ್ಪಕ್ಕೆ ನಿತ್ಯ ಪ್ರಯಾಣಿಸುತ್ತಾರೆ.

ಮೊಮ್ಮಕ್ಕಳಿಗಾಗಿ ಟಗರಿನ ಚಕ್ಕಡಿ ತಯಾರಿಸಿದ ವೃದ್ಧ
ಮೊಮ್ಮಕ್ಕಳಿಗಾಗಿ ಟಗರಿನ ಚಕ್ಕಡಿ ತಯಾರಿಸಿದ ವೃದ್ಧ

By

Published : Aug 2, 2020, 1:42 PM IST

ಕಲಘಟಗಿ: ಬಂಡಿಗೆ ಎತ್ತು, ಎಮ್ಮೆ, ಕುದುರೆ ಕಟ್ಟುವದನ್ನ ನೋಡಿದ್ದೇವೆ. ಆದರೆ ಇಲ್ಲೊಬ್ಬ ರೈತ ಸಣ್ಣ ಚಕ್ಕಡಿಗೆ ಟಗರುಗಳನ್ನು ಕಟ್ಟಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

ಮೊಮ್ಮಕ್ಕಳಿಗಾಗಿ ಟಗರಿನ ಬಂಡಿ ತಯಾರಿಸಿದ ವೃದ್ಧ

ತಾಲೂಕಿನ ಬಣದೂರಿನ ರೈತ ತನ್ನ ಮೊಮ್ಮಕಳ ಖುಷಿಗಾಗಿ ಚಿಕ್ಕ ಚಕ್ಕಡಿ ಮಾಡಿ ಅದಕ್ಕೆ ಟಗರುಗಳನ್ನು ಕಟ್ಟಿ, ಬಣದೂರಿಂದ ಗಳಗಿ ಹುಲಕೊಪ್ಪಕ್ಕೆ ನಿತ್ಯ ಪ್ರಯಾಣಿಸುತ್ತಾರೆ. ಅಲ್ಲದೆ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಟಗರಿನ ಚಕ್ಕಡಿಯಲ್ಲಿಯೇ ತೆಗೆದುಕೊಂಡು ಬರುತ್ತಾರೆ.

ಇವರನ್ನು ನೋಡಿದ ಶಂಕರ ದಾಸನಕೊಪ್ಪ ಹಾಗೂ ಆತನ ಸ್ನೇಹಿತರು ಟಗರುಗಳ ಬಂಡಿಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು, ಈ ವಿಡಿಯೋ ಸದ್ಯ ಸಖತ್​ ವೈರಲ್ ಆಗಿದೆ. ಸದ್ಯ ಅಜ್ಜನ ಟಗರು ಬಂಡಿಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಸಾವಿರಾರು ಜನ ಈ ವಿಡಿಯೋವನ್ನ ವೀಕ್ಷಣೆ ಮಾಡಿದ್ದಾರೆ.

ABOUT THE AUTHOR

...view details