ಧಾರವಾಡ:ನೇಣು ಬಿಗಿದುಕೊಂಡು ವೃದ್ದನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದಿದೆ.
ಕವಿವಿ ಮುಂಭಾಗದ ತೋಟದಲ್ಲಿ ವೃದ್ಧ ನೇಣಿಗೆ ಶರಣು - ಸಾಧನಕೇರಿ
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೃದ್ಧ ನೇಣಿಗೆ ಶರಣು
ಧಾರವಾಡದ ಭೀಮರಾಯ್ ಕೊಟ್ಲಿ (60) ಆತ್ಮಹತ್ಯೆಗೆ ಶರಣಾದ ವೃದ್ಧನಾಗಿದ್ದು, ನಗರದ ಸಾಧನಕೇರಿ ವಿರಾಟ್ ಅಪಾರ್ಟಮೆಂಟ್ ನಿವಾಸಿಯಾಗಿದ್ದಾರೆ ಎನ್ನಲಾಗಿದೆ.
ಈ ವ್ಯಕ್ತಿಯ ಆತ್ಮಹತ್ಯೆಗೆ ಕಾರಣ ಏನು ತಿಳಿದು ಬಂದಿಲ್ಲ, ಕರ್ನಾಟಕ ವಿಶ್ವ ವಿದ್ಯಾಲಯದ ಮುಂಭಾಗದಲ್ಲಿರುವ ತೋಟದಲ್ಲಿ ನೇಣಿಗೆ ಶರಣಾಗಿದ್ದಾರೆ. ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.