ಹುಬ್ಬಳ್ಳಿ : ಆ್ಯಂಬುಲೆನ್ಸ್ ಸಮಯಕ್ಕೆ ಸರಿಯಾಗಿ ಬಾರದ ಕಾರಣ ಹೃದಯಾಘಾತಕ್ಕೊಳಗಾದ ವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ನಗರದ ಸಾಯಿ ಬಾಬಾ ಮಂದಿರದ ಬಳಿ ನಡೆದಿದೆ. ತಾಲೂಕಿನ ಬಂಡವಾಡ ಗ್ರಾಮದ ಮಲ್ಲಪ್ಪ ರೆಡ್ಡೇರ್ (60) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ.
ಸಮಯಕ್ಕೆ ಸರಿಯಾಗಿ ಬಾರದ ಆ್ಯಂಬುಲೆನ್ಸ್.. ಹಾರಿ ಹೋಯಿತು ವೃದ್ದನ ಜೀವ - ಈಟಿವಿ ಭಾರತ ಕನ್ನಡ
ಆ್ಯಂಬುಲೆನ್ಸ್ ಬರುವುದು ತಡವಾಗಿ ಹೃದಯಾಘಾತಕ್ಕೊಳಗಾದ ವೃದ್ಧ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಸಮಯಕ್ಕೆ ಸರಿಯಾಗಿ ಬಾರದ ಆ್ಯಂಬುಲೆನ್ಸ್.. ಹಾರಿ ಹೋಯಿತು ವೃದ್ದನ ಜೀವ
ಇಂದು ಮುಂಜಾನೆ ಸಂತೆಗೆ ಬಂದಿದ್ದ ವೃದ್ಧ ಮಲ್ಲಪ್ಪ ನಗರದ ಸಾಯಿಬಾಬ ಮಂದಿರದ ಬಳಿ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ವೃದ್ಧರನ್ನು ಕಿಮ್ಸ್ಗೆ ರವಾನಿಸಲು ಆ್ಯಂಬುಲೆನ್ಸ್ಗೆ ಕರೆ ಮಾಡಿದರೂ, ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಬಾರದೇ ವೃದ್ಧರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಸ್ಥಳಕ್ಕೆ ದೌಡಾಯಿಸಿದ ಉಪ ನಗರ ಪೋಲಿಸ್ ಠಾಣೆ ಸಿಬ್ಬಂದಿ ಮೃತ ವೃದ್ಧರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಸಾಲ ಪಡೆದು ಪೊಲೀಸರ ಬಲೆಗೆ ಬಿದ್ದ ಹಳೆ ಪ್ರಕರಣದ ಆರೋಪಿ!