ಹುಬ್ಬಳ್ಳಿ:ಹಳೇ ಹುಬ್ಬಳ್ಳಿಯಲ್ಲಿ ಗಲಭೆ ನಡೆದ ಪ್ರದೇಶಕ್ಕೆ ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದರು. ಇದೇ ವೇಳೆ ದಿಡ್ಡಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆ ನೋಡಿದ್ರೆ ಪೂರ್ವನಿಯೋಜಿತ ಅನಿಸುತ್ತದೆ. ಇದೊಂದು ಭಾವನೆಗಳಿಂದ ಕೆರಳಿದ ಘಟನೆ ಅಲ್ಲ. ದೇವಾಲಯಗಳ ಮೇಲೆ ಮತ್ತು ಪೊಲೀಸರ ಮೇಲೆ ನಡೆದ ದಾಳಿಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಗಲಭೆಗೆ ಯಾರೇ ಕಾರಣವಾಗಿರಲಿ, ನಾವು ಅವರನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದರು.