ಹುಬ್ಬಳ್ಳಿ:ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಕಾರ್ಪೋರೇಟರ್ ನಜೀರ್ ಅಹ್ಮದ ಹೊನ್ಯಾಳನನ್ನು ಈಗಾಗಲೇ ಬಂಧಿಸಲಾಗಿತ್ತು. ಇದೀಗ ಅದೇ ಪಕ್ಷದ ಮತ್ತೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಎಐಎಂಐಎಂ ಪಕ್ಷದ ನಗರ ಘಟಕದ ಅಧ್ಯಕ್ಷ ದಾದಾಪೇರ ಬೆಟಗೇರಿಯನ್ನು ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಹಳೇ ಹುಬ್ಬಳ್ಳಿ ಗಲಭೆ: ಎಐಎಂಐಎಂ ಪಕ್ಷದ ನಗರ ಘಟಕ ಅಧ್ಯಕ್ಷನ ಬಂಧನ - Old Hubli Riot case
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಪಕ್ಷದ ನಗರ ಘಟಕದ ಅಧ್ಯಕ್ಷ ದಾದಾಪೇರ ಬೆಟಗೇರಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಎಐಎಂಐಎಂ ಪಕ್ಷದ ನಗರ ಘಟಕ ಅಧ್ಯಕ್ಷನ ಬಂಧನ
ದಾದಾಪೀರ್ ಬೆಟಗೇರಿಯನ್ನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಕರೆತಂದಿರುವ ಪೊಲೀಸರು ಡ್ರಿಲ್ಲಿಂಗ್ ನಡೆಸಿದ್ದಾರೆ. ನಿನ್ನೆ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ ಹೊನ್ಯಾಳ ಬಂಧನದ ಬೆನ್ನಲ್ಲೇ ಇವರನ್ನು ಬಂಧನ ಮಾಡಿರುವುದು ಕುತೂಹಲ ಮೂಡಿಸಿದೆ. ಗಲಭೆಯಲ್ಲಿ ಇವರ ಪಾತ್ರದ ಕುರಿತು ವಿಚಾರಣೆಯಿಂದ ತಿಳಿದು ಬರಬೇಕಿದೆ.
ಇದನ್ನೂ ಓದಿ:ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ಮಾಡಬಾರದು: ಸಿದ್ದರಾಮಯ್ಯ