ಧಾರವಾಡ: ಮೈತ್ರಿ ಸರ್ಕಾರ ಪತನಗೊಂಡು ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ನೇಮಕವಾದ್ರೂ ನಗರದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಹೆಚ್.ಡಿ.ಕುಮಾರಸ್ವಾಮಿ ಅವರ ಬ್ಯಾನರ್ಗಳನ್ನು ತೆರವುಗೊಳಿಸಿಲ್ಲ.
ಮುಖ್ಯಮಂತ್ರಿ ಬದಲಾದ್ರು: ಸರ್ಕಾರಿ ಕಚೇರಿಗಳಲ್ಲಿ ದೋಸ್ತಿ ಸರ್ಕಾರದ ಬ್ಯಾನರ್ - old government banner
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಿದ್ದರೂ, ಧಾರವಾಡ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತೆರವುಗೊಳಿಸದೇ ಬಿಟ್ಟ ದೋಸ್ತಿ ಸರ್ಕಾರದ ಜೆಡಿಎಸ್, ಕಾಂಗ್ರೆಸ್ ನಾಯಕರ ಫೋಟೋ ರಾರಾಜಿಸುತ್ತಿವೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಳೆ ಸರ್ಕಾರದ ಬ್ಯಾನರ್ಗಳು ರಾರಾಜಿಸುತ್ತಿರುವುದು
ಧಾರವಾಡದ ಮಿನಿ ವಿಧಾನಸೌಧದ ಪ್ರಾಂಗಣದಲ್ಲಿರುವ ಮೈತ್ರಿ ಸರ್ಕಾರದ ಅವಧಿಯಲ್ಲಿ ಯೋಜನೆಗಳ ಕುರಿತ ಮಾಹಿತಿಯನ್ನು ಹಾಕಲಾಗಿತ್ತು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಂದು ಬ್ಯಾನರ್ನಲ್ಲಿ ಬರೆಯಲಾಗಿದೆ. ಸರ್ಕಾರದ ತಿಂಗಳ ತಿರುಳು ಬ್ಯಾನರ್ನಲ್ಲಿ ದೋಸ್ತಿ ಸರ್ಕಾರದ ಹಳೆಯ ಹುದ್ದೆಗಳ ಜತೆ ಆಕರ್ಷಕ ಫೋಟೊಗಳು ಇನ್ನೂ ರಾರಾಜಿಸತ್ತಿವೆ.