ಹುಬ್ಬಳ್ಳಿ:ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಹಳೇ ಹುಬ್ಬಳ್ಳಿಯ ಫತೇಶಾ ನಗರದಲ್ಲಿ ನಡೆದಿದೆ.
ಹಳೇ ವೈಷಮ್ಯ ಹಿನ್ನೆಲೆ 2 ಗುಂಪುಗಳ ನಡುವೆ ಮಾರಾಮಾರಿ: ಓರ್ವನಿಗೆ ಗಂಭೀರ ಗಾಯ - ಹಳೆಹುಬ್ಬಳ್ಳಿಯ ಫತೇಶಾ ನಗರ
ಹಳೇ ಹುಬ್ಬಳ್ಳಿಯ ಫತೇಶಾ ನಗರದಲ್ಲಿ ಹಳೇ ವೈಷಮ್ಯದ ಹಿನ್ನೆಲೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದರಿಂದ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಹಳೆ ವೈಷಮ್ಯ ಹಿನ್ನೆಲೆ ಎರಡು ಗುಂಪುಗಳ ನಡುವೆ ಮಾರಾಮಾರಿ
ವಸೀಂ ಮೆಸ್ತ್ರಿ ವನವಾಡ (30) ಎಂಬುವವರ ತಲೆಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಕಿಮ್ಸ್ಗೆ ದಾಖಲಿಸಲಾಗಿದೆ. ಒಂದೇ ಬಡಾವಣೆಯ ನಿವಾಸಿಗಳಾದ ವಸೀಂ ಹಾಗೂ ಡಾ. ಅಣ್ವೇರಿ ಕುಟುಂಬದ ನಡುವೆ ಹಳೇ ವೈಷಮ್ಯ ಇತ್ತು ಎನ್ನಲಾಗಿದೆ. ಹಲ್ಲೆ ನಡೆಸಿದ್ದಾರೆ ಎನ್ನಲಾದ ಡಾ. ಅಣ್ವೇರಿ, ಆತನ ಮಗ ವಸೀಂ ಅಣ್ವೆರಿಗೂ ಗಾಯಗಳಾಗಿವೆ. ಇವರಿಬ್ಬರೂ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.