ಹುಬ್ಬಳ್ಳಿ:ತಾಲೂಕಿನ ಶಿರಗುಪ್ಪಿ ಗ್ರಾಮದ ನಿವಾಸಿಗಳು ಹಾಗೂ ಪ್ರಗತಿಪರ ರೈತರಾಗಿದ್ದ ಶಿವಪುತ್ರಪ್ಪ ಶಿದ್ಧಪ್ಪ ನೆಲಗುಡ್ಡ (90) ಮತ್ತು ಶಿವಪುತ್ರಪ್ಪ ಪತ್ನಿ ಬಸಮ್ಮ ಶಿವಪುತ್ರಪ್ಪ ನೆಲಗುಡ್ಡ (86) ಮಂಗಳವಾರ ನಿಧನರಾಗಿದ್ದಾರೆ.
ಮೃತರಿಗೆ ಇಬ್ಬರು ಗಂಡು ಮಕ್ಕಳು ಒಬ್ಬ ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಪ್ರಮಾಣದ ಬಂಧುಗಳನ್ನ ಅಗಲಿದ್ದಾರೆ. ಮೃತ ಶಿವಪುತ್ರಪ್ಪ ಶಿದ್ಧಪ್ಪ ನೆಲಗುಡ್ಡ ಕೃಷಿಯಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ರೈತರು ಬೆಳೆ ಹಾನಿ, ಸಾಲ ಶೂಲಕ್ಕೆ ಸಿಲುಕಿ ಸಾವನ್ನಪ್ಪಬಾರದು ಎಂದು ಜಮೀನುಗಳಲ್ಲಿ ಮಿಶ್ರ ಬೆಳೆ ಹಾಗೂ ಹವಾಮಾನ ಆಧಾರಿತ ಬೆಳೆ ಬೆಳೆದು ಮಾದರಿಯಾದವರು.