ಹುಬ್ಬಳ್ಳಿ :ವಾಯವ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಕಳೆದೆರಡು ವರ್ಷಗಳಿಂದ ಸಂಪೂರ್ಣ ವೇತನ ಸಿಗುತ್ತಿಲ್ಲ. ಪ್ರತಿ ವರ್ಷ ನೀಡ್ತಿದ್ದ ಒಂದು ಜತೆ ಸಮವಸ್ತ್ರ ನೀಡುವ ಕ್ರಮವನ್ನೂ ಮೂರುವರ್ಷಗಳಿಂದ ಅನುಸರಿಸುತ್ತಿಲ್ಲ. ಅಧಿಕಾರಿಗಳನ್ನು ಈ ಬಗ್ಗೆ ಪ್ರಶ್ನೆ ಮಾಡಿದರೆ, ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂಬ ರೆಡಿಮೇಡ್ ಉತ್ತರ ಕೇಳಿ ಬರುತ್ತದೆ.
ವಾಯವ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಸಿಕ್ಕಿಲ್ಕ ಮೂರು ವರ್ಷದಿಂದ ಸಮವಸ್ತ್ರ.. ವಾಯವ್ಯ ಸಾರಿಗೆ ಸಂಸ್ಥೆ ಕಳೆದೆರಡೂ ವರ್ಷಗಳಿಂದ ಸಿಬ್ಬಂದಿಗೆ ಸಂಪೂರ್ಣ ವೇತನ ನೀಡತ್ತಿಲ್ಲ. ಸಿಬ್ಬಂದಿ ಅರ್ಧಂಬರ್ಧ ವೇತನದಲ್ಲಿಯೇ ಜೀವನವನ್ನು ಸಾಗಿಸುತ್ತಿದ್ದಾರೆ. ಈ ಸಂಸ್ಥೆಯಲ್ಲಿ 23 ಸಾವಿರ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಗೆ ವೇತನದ ಜೊತೆಗೆ ವರ್ಷಕ್ಕೆ ಎರಡು ಜೋಡಿ ಸಮವಸ್ತ್ರ ನೀಡಬೇಕಿದ್ದ ಸಾರಿಗೆ ಸಂಸ್ಥೆ ಮೂರು ವರ್ಷಗಳಾದರೂ ಸಮವಸ್ತ್ರ ನೀಡಿಲ್ಲ. ಶಿಸ್ತು ಕಾಪಾಡಲು ಸೂಚನೆ ನೀಡುವ ಸಂಸ್ಥೆಯೇ ಅಶಿಸ್ತಿನಿಂದ ವರ್ತಿಸುತ್ತಿರುವುದು ಸಿಬ್ಬಂದಿ ಆಕ್ರೋಶಕ್ಕೆ ಕಾರಣವಾಗಿದೆ.
ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ, ಈ ತಿಂಗಳು ಕೊಡುತ್ತೇವೆ. ಮುಂದಿನ ತಿಂಗಳು ಕೊಡುತ್ತೇವೆ ಎಂದು ಉತ್ತರ ನೀಡುತ್ತಿದ್ದಾರೆ ವಿನಃ ವರ್ಷಕ್ಕೆ ಒಂದು ಜೋಡಿ ಸಮವಸ್ತ್ರ ನೀಡುವ ಬಗ್ಗೆ ಚಿಂತನೆ ನಡೆಸಿಲ್ಲ. ಸಾರಿಗೆ ಸಂಸ್ಥೆ ಅಧ್ಯಕ್ಷರು ಮಾತ್ರ ಶೀಘ್ರವಾಗಿ ಕೊಡುತ್ತೇವೆ ಎಂದು ಭರವಸೆ ನೀಡುತ್ತಿದ್ದಾರೆ. ನಷ್ಟದ ಹೆಸರಿನಲ್ಲಿ ಸಾರಿಗೆ ಸಂಸ್ಥೆ ಸಾರ್ವಜನಿಕರ ಜೊತೆಗೆ ಸಿಬ್ಬಂದಿಗೂ ದಾರಿ ತಪ್ಪಿಸುವ ಕಾರ್ಯಕ್ಕೆ ಮುಂದಾಗಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಒಂದು ಕಡೆ ಸರಿಯಾಗಿ ವೇತನ ಇಲ್ಲದೆ ಇದ್ದರೂ ಸಿಬ್ಬಂದಿ ಕೆಲಸ ಮಾಡಬಹುದು. ಆದರೆ, ಹಾಕಿಕೊಳ್ಳಲು ಬಟ್ಟೆಗಳು ಇಲ್ಲದೆ ಇದ್ದರೆ ಮರ್ಯಾದೆ ಮುಚ್ಚಿಕೊಳ್ಳುವುದು ಹೇಗೆ..? ಆದ್ದರಿಂದ ಸಂಬಂಧಿಸಿದವರು ಎಚ್ಚೆತ್ತು ಸಮವಸ್ತ್ರ ನೀಡಿ ಸಿಬ್ಬಂದಿ ಮಾನ ಕಾಪಾಡಬೇಕಿದೆ.
ಇದನ್ನೂ ಓದಿ:ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ: ಸಿದ್ದರಾಮಯ್ಯ