ಕರ್ನಾಟಕ

karnataka

ETV Bharat / state

ಆಯುಧ ಪೂಜೆಗೆ ಕೇವಲ 50 ರೂ.‌ನಿಗದಿ ಮಾಡಿದ ಸಾರಿಗೆ ಸಂಸ್ಥೆ: ಸಿಬ್ಬಂದಿ ಅಸಮಾಧಾನ - ವಾಯುವ್ಯ ಸಾರಿಗೆ ಸಂಸ್ಥೆ

ವಿಜಯದಶಮಿ ಹಿನ್ನೆಲೆ ಆಯುಧ ಪೂಜೆಗೆ ವಾಯುವ್ಯ ಸಾರಿಗೆ ಇಲಾಖೆ, ಬಸ್​ಗಳ ಪೂಜೆಗಾಗಿ ಕೇವಲ 50 ರೂಪಾಯಿ ನಿಗದಿ ಪಡಿಸಿದ್ದರಿಂದ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Kn_hbl_04_nw
ಸಾರಿಗೆ ಬಸ್​

By

Published : Oct 4, 2022, 3:35 PM IST

ಹುಬ್ಬಳ್ಳಿ:ಈ ಬಾರಿಯ ವಿಜಯದಶಮಿಸಾರಿಗೆ ಇಲಾಖೆ ಬಸ್ ಚಾಲಕರು ಹಾಗೂ ನಿರ್ವಾಕರ ಖುಷಿ ಕಸಿದುಕೊಂಡಿದೆ‌. ಆಯುಧ ಪೂಜೆ ನಿಮಿತ್ತ ಬಸ್​ಗಳ ಪೂಜೆಗೆ ಸಾರಿಗೆ ಇಲಾಖೆ ಕೇವಲ 50 ರೂ.‌ನಿಗದಿ ಮಾಡಿದೆ. ಅದಕ್ಕೆ ತಕ್ಕಂತೆ ಪೂಜೆ ನೆರವೇರಿಸಿ ಚಾಲಕರು ಕೈತೊಳೆದುಕೊಂಡಿದ್ದಾರೆ.

ಆಯುಧ ಪೂಜೆ ಎಂದರೆ ಎಲ್ಲರಿಗೂ ಸಂಭ್ರಮದ ವಿಷಯ. ಪ್ರತಿ ಬಾರಿ ಅದ್ಧೂರಿಯಾಗಿ ವಿಜಯದಶಮಿ ಆಚರಿಸುತ್ತಿದ್ದ ಸಾರಿಗೆ ನೌಕರರು, ಬಸ್​ಗಳಿಗೆ ವಿಶೇಷವಾಗಿ ಅಲಂಕರಿಸಿ ಪೂಜೆ ನೆರವೇರಿಸುವ ಪದ್ಧತಿ ಇತ್ತು. ಆದ್ರೆ ಸಾರಿಗೆ ಇಲಾಖೆ ಕೇವಲ 50 ರೂಪಾಯಿ ನೀಡೋಕೆ ಮುಂದಾಗಿರೋದ್ರಿಂದ ಸಾರಿಗೆ ಸಿಬ್ಬಂದಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ವಿಭಾಗೀಯ ಕಾರ್ಯಾಗಾರಕ್ಕೆ ಆಯುಧ ಪೂಜೆಗಾಗಿ 1,000 ರೂಪಾಯಿ ಹಾಗೂ ಪ್ರಾದೇಶಿಕ ಕಾರ್ಯಾಗಾರಕ್ಕೆ 2,000 ರೂಪಾಯಿಯನ್ನು ಸಂಸ್ಥೆ ನಿಗದಿಗೊಳಿಸಿದೆ. ಹೀಗಾಗಿ ವಾಯುವ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿಯ ಸಂಭ್ರಮ ಮಾಯವಾಗಿದೆ‌. ಆದರೆ ನಗರದಲ್ಲಿ ಖಾಸಗಿ ಬಸ್​ಗಳು ಮಾತ್ರ ಹೂವಿನ ಹಾರಗಳಿಂದ ಅಲಂಕೃತವಾಗಿದ್ದು, ಸರ್ಕಾರಿ ಬಸ್​ಗಳ ಮಾತ್ರ ಎಂದಿನಂತೆ ಯಾವುದೇ ಅಲಂಕಾರವಿಲ್ಲದೆ ತಿರುಗಾಡುತ್ತಿರುವುದು ಚಾಲಕರಿಗೆ ಬೇಸರ ಮೂಡಿಸಿದೆ.

ಇದನ್ನೂ ಓದಿ:ಆಯುಧ ಪೂಜಾ ಹಿನ್ನೆಲೆ: ಗಜಪಡೆಗೆ ವಿಶೇಷ ಪೂಜೆ

ABOUT THE AUTHOR

...view details