ಕರ್ನಾಟಕ

karnataka

ETV Bharat / state

ನನ್ನ ಮಗನಿಗೆ ಸಾಲ ಕೊಡಬೇಡಿ, ಆತ ದುಶ್ಚಟಗಳಿಗೆ ಬಲಿಯಾಗಿದ್ದಾನೆ : ವಿ.ಎಸ್ ಪಾಟೀಲ್ ಪತ್ರಿಕಾ ಪ್ರಕಟಣೆ - NWKRTC chairman VS Patil press release about son

ನನ್ನ ಮಗನ ಸುಳ್ಳು ಆಶ್ವಾಸನೆಗೆ ಮರುಳಾಗಿ ಯಾರೂ ಸಾಲ ನೀಡಬೇಡಿ. ಕಳೆದ ಐದಾರು ವರ್ಷಗಳಿಂದ ದುಶ್ಚಟಕ್ಕೆ ಬಿದ್ದಿದ್ದಾನೆ. ಆತನ ಮಾನಸಿಕ ಸ್ಥಿತಿಯೂ ಸರಿಯಿಲ್ಲ. ಆದ್ದರಿಂದ ಯಾರೂ ಸಾಲ ನೀಡಬೇಡಿ ಎಂದು NWKRTC ಚೇರಮನ್ ವಿ.ಎಸ್ ಪಾಟೀಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

nwkrtc-chairman-vs-patil-press-release-about-son
ಮಗನ ಬಗ್ಗೆ ವಿಎಸ್ ಪಾಟೀಲ್ ಪತ್ರಿಕಾ ಪ್ರಕಟಣೆ

By

Published : Jul 5, 2022, 5:47 PM IST

ಹುಬ್ಬಳ್ಳಿ :ನನ್ನ ಮಗನಿಗೆ ಯಾರೂ ಸಾಲ ಕೊಡಬೇಡಿ. ಆತ ದುಶ್ಚಟಕ್ಕೆ ಬಲಿಯಾಗಿ ತನ್ನ ಎಲ್ಲ ಆಸ್ತಿಯನ್ನು ಮಾರಿಕೊಂಡಿದ್ದಾನೆ ಎಂದು ತನ್ನ ಮಗನ ಬಗ್ಗೆ NWKRTC ಚೇರಮನ್ ವಿ.ಎಸ್ ಪಾಟೀಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಮಗನ ನಡೆಯಿಂದ ಬೇಸತ್ತಿರುವ ಮಾಜಿ ಶಾಸಕ ಪಾಟೀಲ್ ಅವರು ನನ್ನ ಸ್ವಂತ ಮಗನೇ ನನ್ನ ಹೆಸರನ್ನು ದುರ್ಬಳಕ್ಕೆ ಮಾಡಿಕೊಳ್ಳುತ್ತಿದ್ದಾನೆ. ನನ್ನ ಪುತ್ರ ಬಾಪೂಗೌಡ ಪಾಟೀಲ್​​ಗೆ ಯಾರೂ ಕೂಡ ಸಾಲ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

ಮಗನ ಬಗ್ಗೆ ವಿಎಸ್ ಪಾಟೀಲ್ ಪತ್ರಿಕಾ ಪ್ರಕಟಣೆ

ಪದವೀಧರನಾದ ನನ್ನ ಮಗ ಕಳೆದ ಐದಾರು ವರ್ಷಗಳಿಂದ ದುಶ್ಚಟಕ್ಕೆ ಬಿದಿದ್ದಾನೆ. ಕೋಟಿಗಟ್ಟಲೆ ಸಾಲ ಮಾಡಿ, ಸಾಲ ತೀರಿಸಲು ಅವನ ಹೆಸರಿನಲ್ಲಿದ್ದ ಆಸ್ತಿಯನ್ನು ಮಾರಿದ್ದಾನೆ. ಅವರ ಮಾನಸಿಕ ಸ್ಥಿತಿ ಸರಿ ಇಲ್ಲ. ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡು ಜನರಿಗೆ ಸುಳ್ಳು ಆಶ್ವಾಸನೆ ನೀಡಿ ಸಾಲ ಪಡೆಯುತ್ತಿದ್ದಾನೆ. ಜನರು ನನ್ನ ಮಗನ ಮಾತಿಗೆ ಮರಳಾಗಿ ಸಾಲ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

ಓದಿ :ರಾಮನಗರದಲ್ಲಿ ಬುನಾದಿ ಅಗೆಯುವಾಗ ಪುರಾತನ ಕಟ್ಟಡ ಪತ್ತೆ: ಟಿಪ್ಪು ಕಾಲದ್ದಿರಬಹುದೆಂಬ ಶಂಕೆ

For All Latest Updates

ABOUT THE AUTHOR

...view details