ಕರ್ನಾಟಕ

karnataka

ETV Bharat / state

ಸಂಕಷ್ಟದಲ್ಲಿದ್ದೇವೆ, ವಿಶೇಷ ಪ್ಯಾಕೇಜ್ ನೀಡಿ : ಸರ್ಕಾರಕ್ಕೆ NWKSRTC ಮನವಿ - North West Transport Corporation Chairman VS Patila

ಕೋವಿಡ್​ನಿಂದ ಸಂಸ್ಥೆಯ 73 ನೌಕರರು ಮೃತಪಟ್ಟಿದ್ದಾರೆ. 700ಕ್ಕೂ ಅಧಿಕ ನೌಕರರು ಸೋಂಕಿಗೆ ತುತ್ತಾಗಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ, ಚಿಕಿತ್ಸೆ ಪಡೆದವರಿಗೆ ಚಿಕಿತ್ಸಾ ಶುಲ್ಕ ಭರಿಸಲು ಕೂಡ ಸಾರಿಗೆ ಸಂಸ್ಥೆಗೆ ಸಾಧ್ಯವಾಗಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು..

nwkrtc-asked-government-help
ಸರ್ಕಾರಕ್ಕೆ NWKRTC ಮನವಿ

By

Published : Jun 19, 2021, 7:49 PM IST

ಹುಬ್ಬಳ್ಳಿ :ನಿವೃತ್ತರಿಗೆ ಪಿಂಚಣಿ ನೀಡಿಲ್ಲ. ನೌಕರರ ಎಲ್ಐಸಿ, ಪಿಎಫ್ ತುಂಬಿಲ್ಲ. ಬ್ಯಾಂಕ್​ನಿಂದ ಪಡೆದ ಸಾಲಕ್ಕೆ ಬಡ್ಡಿ ಪಾವತಿಸಿಲ್ಲ. ಕೋವಿಡ್​ನಿಂದ ಮೃತಪಟ್ಟ ಸಿಬ್ಬಂದಿಗೆ ಪರಿಹಾರ ನೀಡಿಲ್ಲ‌. ಹೀಗಾಗಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 1100 ಕೋಟಿ ವಿಶೇಷ ಪ್ಯಾಕೇಜ್ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಸರ್ಕಾರಕ್ಕೆ NWKSRTC ಮನವಿ

ಈ ಬಗ್ಗೆ ಮಾತನಾಡಿರುವ ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ, ಸಂಸ್ಥೆಯು ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟು, ಯಾವುದ್ಯಾವುದಕ್ಕೆ ಹಣ ಖರ್ಚು ಮಾಡಬೇಕಿದೆ. ಮಾಡದಿದ್ದರೆ ಏನೇನು ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುವುದನ್ನೆಲ್ಲ ಎಳೆ ಎಳೆಯಾಗಿ ಬಿಚ್ಚಿಟ್ಟು, ವಿಶೇಷ ಪ್ಯಾಕೇಜ್ ನೀಡುವಂತೆ ಕೋರಿ ಸಂಸ್ಥೆಯು ಸರ್ಕಾರಕ್ಕೆ ಜೂನ್ 4ರಂದು ಪತ್ರ ಬರೆದು ಕೋರಿದೆ. ಆದರೆ, ಸರ್ಕಾರದಿಂದ ಇನ್ನೂ ಉತ್ತರ ಬಂದಿಲ್ಲ ಎಂದಿದ್ದಾರೆ.

ಕೋವಿಡ್​ನಿಂದ ಸಂಸ್ಥೆಯ 73 ನೌಕರರು ಮೃತಪಟ್ಟಿದ್ದಾರೆ. 700ಕ್ಕೂ ಅಧಿಕ ನೌಕರರು ಸೋಂಕಿಗೆ ತುತ್ತಾಗಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ, ಚಿಕಿತ್ಸೆ ಪಡೆದವರಿಗೆ ಚಿಕಿತ್ಸಾ ಶುಲ್ಕ ಭರಿಸಲು ಕೂಡ ಸಾರಿಗೆ ಸಂಸ್ಥೆಗೆ ಸಾಧ್ಯವಾಗಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದು ವಿ ಎಸ್ ಪಾಟೀಲ ಮನವಿ ಮಾಡಿದ್ದಾರೆ.

ಓದಿ:watch video- ಪ್ರಸಿದ್ಧ ಇರ್ವಿನ್​ ಸೇತುವೆ ಮೇಲಿಂದ ಉಕ್ಕಿ ಹರಿಯುತ್ತಿರುವ ಕೃಷ್ಣೆಯ ಒಡಲಾಳಕ್ಕೆ ಜಿಗಿದ ಯುವಕ

ABOUT THE AUTHOR

...view details