ಹುಬ್ಬಳ್ಳಿ: ಭಾರತದ 13ನೇ ರಾಷ್ಟ್ರಪತಿಯಾಗಿ, ದೇಶದ ಆರ್ಥಿಕ ಸಚಿವರಾಗಿ ಕಾರ್ಯನಿರ್ವಹಿಸಿದ್ದ "ಭಾರತ ರತ್ನ" ಪುರಸ್ಕೃತ ಪ್ರಣಬ್ ಮುಖರ್ಜಿ (84) ನಿಧನಕ್ಕೆ ಧಾರವಾಡ ಜಿಲ್ಲಾ ಎನ್ಎಸ್ಯುಐ ಕಾರ್ಯಕರ್ತರು ಸಂತಾಪ ಸೂಚಿಸಿದರು.
ಪ್ರಣಬ್ ಮುಖರ್ಜಿ ನಿಧನಕ್ಕೆ ಎನ್ಎಸ್ಯುಐ ಸಂತಾಪ - Pranab Mukherjee's death
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನಕ್ಕೆ ಧಾರವಾಡ ಜಿಲ್ಲಾ ಎನ್ಎಸ್ಯುಐ ಕಾರ್ಯಕರ್ತರು ಸಂತಾಪ ಸೂಚಿಸಿದರು.
ಪ್ರಣಬ್ ಮುಖರ್ಜಿ ನಿಧನಕ್ಕೆ ಸಂತಾಪ ಸೂಚಿಸಿದ ಎನ್ಎಸ್ಯುಐ ಕಾರ್ಯಕರ್ತರು
ಹುಬ್ಬಳ್ಳಿ ಆನಂದನಗರ ಸರ್ಕಲ್ನಲ್ಲಿ ದೀಪ ಹಿಡಿದು ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಈ ಸಂದರ್ಭ ಎನ್ಎಸ್ಯುಐ ಕಾರ್ಯದರ್ಶಿ ದೀಪಕ ಘೋಡಕೆ, ರಾಜೇಶ್ ಚೌವ್ಹಾಣ, ಸಚಿನ್ ಲಮಾಣಿ, ವಿಜಯ ಹವಳದ, ಕಿರಣ್ ಖರ್ಚಿಗೆ, ಚೇತನ್ ಕೋಟಿ, ಅಶೋಕ ಚಲವಾದಿ, ರಫೀಕ್ ಕುಂಬಿ, ಗುರುನಾಥ್ ಶಿರಗುಪ್ಪಿ, ಪಟ್ಟಣಶೆಟ್ಟಿ, ಲಿಂಗರಾಜ ಕಿರೇಸೂರ್ ಸೇರಿದಂತೆ ಹಲವು ಕಾರ್ಯಕರ್ತರು ಹಾಗೂ ಆಟೋ ಚಾಲಕರು ಉಪಸ್ಥಿತರಿದ್ದರು.
Last Updated : Sep 1, 2020, 9:44 AM IST