ಧಾರವಾಡ:ಕೋವಿಡ್ ಆಸ್ಪತ್ರೆ ಮತ್ತು ಕೇರ್ ಸೆಂಟರ್ಗಳಿಗೆ ಆಹಾರ ಪೂರೈಸುತ್ತಿರುವ ಗುತ್ತಿಗೆ ಏಜೆನ್ಸಿಯ ಗುಣಮಟ್ಟ ಪರಿಶೀಲನೆಗೆ ಆಹಾರ ಭದ್ರತಾ ಅಧಿಕಾರಿಗಳು ಪ್ರತಿದಿನ ತಪಾಸಣೆ ನಡೆಸಬೇಕೆಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೂಚಿಸಿದ್ದಾರೆ.
ಕೋವಿಡ್ ಕೇರ್ ಸೆಂಟರ್ಗಳಿಗೆ ಆಹಾರ ಪೂರೈಸುತ್ತಿರುವ ಗುತ್ತಿಗೆ ಏಜೆನ್ಸಿ ಗುಣಮಟ್ಟ ಪರಿಶೀಲನೆಗೆ ಡಿಸಿ ಸೂಚನೆ! - District Collector Nitesh Patil
ಕೋವಿಡ್ ಆಸ್ಪತ್ರೆ ಮತ್ತು ಕೇರ್ ಸೆಂಟರ್ಗಳಿಗೆ ಆಹಾರ ಪೂರೈಸುತ್ತಿರುವ ಗುತ್ತಿಗೆ ಏಜೆನ್ಸಿಯ ಗುಣಮಟ್ಟ ಪರಿಶೀಲನೆಗೆ ಆಹಾರ ಭದ್ರತಾ ಅಧಿಕಾರಿಗಳು ಪ್ರತಿದಿನ ತಪಾಸಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೂಚಿಸಿದ್ದಾರೆ.

ಆಹಾರ ಪೂರೈಸುತ್ತಿರುವ ಗುತ್ತಿಗೆ ಏಜೆನ್ಸಿಯ ಗುಣಮಟ್ಟ ಪರಿಶೀಲನೆ
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಹುಬ್ಬಳ್ಳಿ ಗೋಪನಕೊಪ್ಪದ ಮಮ್ಮಾಸ್ ಲಂಚ್ ಬಾಕ್ಸ್ ಆಹಾರ ತಯಾರಿಕಾ ಘಟಕಕ್ಕೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಸಹಾಯಕ ನಿರ್ದೇಶಕ ಮಂಜುನಾಥ ರೇವಣಕರ, ದೇವದಾಸ್ ಹಾಗೂ ಆಹಾರ ಭದ್ರತಾ ಅಧಿಕಾರಿಗಳಾದ ಶಿವಕುಮಾರ್ ಹಾಗೂ ಬೆಂಗೇರಿ ಅವರನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನು ಸರ್ಕಾರ ನಿಗದಿಪಡಿಸಿರುವ ಆಹಾರ ಮೆನು ಪ್ರಕಾರ ಪ್ರತಿ ವ್ಯಕ್ತಿಗೆ ಪ್ರತಿ ದಿನಕ್ಕೆ 235/- ರೂ. ದರದಲ್ಲಿ ಆಹಾರ ಪೂರೈಸಬೇಕು, ಉತ್ತಮ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.