ಹುಬ್ಬಳ್ಳಿ: ಸಾವಜಿ ಹೋಟೆಲ್ಗಳಿಗೆ ಶತಮಾನದ ಇತಿಹಾಸವಿದೆ. ತನ್ನ ವಿಭಿನ್ನ ಹಾಗೂ ವಿಶಿಷ್ಟ ರುಚಿಯ ಮೂಲಕ ಮಾಂಸಹಾರ ಪ್ರೀಯರ ಮನಗೆದ್ದ ಸಾವಜಿ ಖಾನಾವಳಿ ಊಟ ಇನ್ನು ಮುಂದೆ ಆನ್ಲೈನ್ ಡಿಲೆವರಿಗೆ ಸಿದ್ಧವಾಗುತ್ತಿದೆ.
ಉತ್ತರ ಕರ್ನಾಟಕದ ಮಾಂಸಹಾರ ಸಾವಜಿ ಊಟ ಆನ್ಲೈನ್ನಲ್ಲಿ ಲಭ್ಯ - ಸಾವಜಿ ಹೋಟೆಲ್
ಉತ್ತರ ಕರ್ನಾಟಕ ಭಾಗಕ್ಕೆ ಬಂದ ಹೊರ ಜಿಲ್ಲೆಗಳ ಹಾಗೂ ರಾಜ್ಯಗಳ ಜನ ಸಾವಜಿ ಊಟ ಸವಿಯದೆ ಹೋಗುವುದಿಲ್ಲ. ಹೀಗಾಗಿ ಎಸ್ಎಸ್ ಕೆ ಹೋಟೆಲ್ ಮಾಲೀಕರ ಸಂಘ ಈಗ ಅಸ್ತಿತ್ವಕ್ಕೆ ಬಂದಿದ್ದು, ಒಂದೇ ತರಹದ ರುಚಿ ಹಾಗೂ ಒಂದೇ ದರದಲ್ಲಿ ಊಟವನ್ನು ಉಣಬಡಿಸಲು ಸಿದ್ಧತೆ ನಡೆಸಿದೆ.

ಗ್ರಾಹಕರಿಗೆ ಮನೆಯಲ್ಲಿ ಕುಳಿತು ಸಾವಜಿ ಖಾನಾವಳಿ ಊಟವನ್ನು ಜೊಮೊಟೋ ಹಾಗೂ ಸ್ವಿಗ್ಗಿ ಫುಡ್ ಡಿಲೆವರಿ ಆ್ಯಪ್ ಮೂಲಕ ಆರ್ಡರ್ ಮಾಡಬಹುದು. ಸಿಟಿಯಲ್ಲಿ ಸುಮಾರು 200 ಹೋಟೆಲ್ಗಳಿದ್ದು ಚಿಕನ್ , ಮಟನ್ನಲ್ಲಿ ವಿಭಿನ್ನ ಹಾಗೂ ವಿಶಿಷ್ಟ ರುಚಿಯ ಊಟ ತಯಾರಿಸಿ ಖ್ಯಾತಿ ಪಡೆದಿವೆ. ಅವೆಲ್ಲ ಹೊಟೆಲ್ ಗಳನ್ನು ಒಂದೇ ವೇದಿಕೆಯ ಮೂಲಕ ಆನ್ ಡಿಲೆವರಿಗೆ ಕೊಂಡೊಯ್ಯಲು ಸಂಘ ತಯಾರಿ ನಡೆಸಿದೆ.