ಹುಬ್ಬಳ್ಳಿ: ಹುಬ್ಬಳ್ಳಿಯಿಂದ ದೆಹಲಿಗೆ ಇಂಡಿಗೋ ವಿಮಾನಯಾನ ಸೇವೆ ಸೋಮವಾರದಿಂದ ಆರಂಭವಾಗಿದೆ. ಈ ವಿಮಾನದಲ್ಲಿ ಉತ್ತರ ಕರ್ನಾಟಕ ಭಾಷೆ ಕಂಪು ಸೂಸಿದೆ. ಫ್ಲೈಟ್ ಅನೌನ್ಸ್ಮೆಂಟ್ಅನ್ನು ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾಡಿರುವುದು ತುಂಬಾ ವಿಶೇಷವಾಗಿದೆ.
ವಿಮಾನದಲ್ಲಿ ಭಾಷಾ ಸೊಗಡು: ಮೊದಲ ದಿನವೇ ಅಚ್ಚ ಕನ್ನಡದಲ್ಲಿ,"ಎಲ್ಲರಿಗೂ ನಮಸ್ಕಾರ್ ರೀ..ಶರಣು, ನಾನು ಅಕ್ಷಯ್ ಪಾಟೀಲ್.. ಇಲ್ಲೇ ಬೈಲಹೊಂಗಲದವ"! ಎಂದು ಪೈಲಟ್ ಉತ್ತರ ಕರ್ನಾಟಕ ಭಾಷೆಯಲ್ಲಿ ಅನೌನ್ಸ್ ಮಾಡಿದ್ದಾರೆ. ವಿಮಾನಗಳ ಹಾರಾಟಕ್ಕೂ ಮೊದಲು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಸೂಚನೆಗಳನ್ನು ನೀಡಲಾಗುತ್ತಿತ್ತು. ಅಂತದರಲ್ಲಿ ಕನ್ನಡ ಅದರಲ್ಲೂ ಉತ್ತರ ಕರ್ನಾಟಕದ ಜವಾರಿ ಭಾಷೆಯನ್ನು ಕೇಳುವುದು ಸಾಧ್ಯವಿರಲಿಲ್ಲ. ಬೈಲಹೊಂಗಲದ ಅಕ್ಷಯ ಪಾಟೀಲ್ ಇಂಡಿಗೋ ವಿಮಾನದ ಪೈಲಟ್ ಆಗಿದ್ದು, ತಮ್ಮ ಕನ್ನಡಾಭಿಮಾನವನ್ನು ಮೆರೆದಿದ್ದಾರೆ.