ಕರ್ನಾಟಕ

karnataka

ETV Bharat / state

ಗ್ರಾಮ ಪಂ‌ಚಾಯಿತಿ ಚುನಾವಣೆ: ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ - Grama Panchayat elections news

ಧಾರವಾಡ ತಹಶೀಲ್ದಾರ್​​ ಡಾ.ಸಂತೋಷ ಕುಮಾರ ಬಿರಾದಾರ ಅವರು ಧಾರವಾಡ ತಾಲೂಕಿನ ಹಳ್ಳಿಗೇರಿ, ನಿಗದಿ, ದೇವರಹುಬ್ಬಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ, ಚುನಾವಣಾ ಕಾರ್ಯಾಲಯ ಹಾಗೂ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ, ಸಿದ್ಧತೆಗಳನ್ನು ಪರಿಶೀಲಿಸಿದರು.

ಮತದಾನ ಕೇಂದ್ರಗಳಿಲ್ಲಿ ಸಿದ್ಧತೆ ಕುರಿತು ಪರಿಶೀಲನೆ
ಮತದಾನ ಕೇಂದ್ರಗಳಿಲ್ಲಿ ಸಿದ್ಧತೆ ಕುರಿತು ಪರಿಶೀಲನೆ

By

Published : Dec 6, 2020, 8:23 PM IST

ಧಾರವಾಡ: ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ನಡೆಯಲಿರುವ ಚುನಾವಣೆಗೆ ನಾಳೆಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ನಾಮಪತ್ರ ಸ್ವೀಕಾರಕ್ಕಾಗಿ ಚುನಾವಣಾ ಕಾರ್ಯಾಲಯಗಳು ಆರಂಭವಾಗಿವೆ. ಇವುಗಳ ಸಿದ್ಧತೆಯನ್ನು ಅಧಿಕಾರಿಗಳು ಪರಿಶೀಲಿಸಿದರು.

ಧಾರವಾಡ ತಹಶೀಲ್ದಾರ್​ ಕಚೇರಿಯಿಂದ ಚುನಾವಣಾ ಸಾಮಗ್ರಿ ಹಾಗೂ ಕೋವಿಡ್-19 ಸುರಕ್ಷತಾ ಸಾಮಗ್ರಿಗಳನ್ನು ಗ್ರಾಮ ಪಂಚಾಯಿತಿ ಚುನಾವಣಾಧಿಕಾರಿಗಳಿಗೆ ಇಂದು ವಿತರಿಸಲಾಯಿತು.

ಮತದಾನ ಕೇಂದ್ರಗಳಿಲ್ಲಿ ಸಿದ್ಧತೆ ಕುರಿತು ಪರಿಶೀಲನೆ

ಧಾರವಾಡ ತಹಶೀಲ್ದಾರ್​​ ಡಾ. ಸಂತೋಷ ಕುಮಾರ ಬಿರಾದಾರ ಅವರು ಧಾರವಾಡ ತಾಲೂಕಿನ ಹಳ್ಳಿಗೇರಿ, ನಿಗದಿ, ದೇವರಹುಬ್ಬಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ, ಚುನಾವಣಾ ಕಾರ್ಯಾಲಯ ಹಾಗೂ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ, ಸಿದ್ಧತೆಗಳನ್ನು ಪರಿಶೀಲಿಸಿದರು.

ಓದಿ:ಕೇಂದ್ರ ಸಚಿವರ ಎದುರೇ ಕೈ ಶಾಸಕ - ಪಾಲಿಕೆ ಮಾಜಿ ಸದಸ್ಯನ ಮಧ್ಯೆ ಮಾತಿನ ಚಕಮಕಿ

ಧಾರವಾಡ ತಾಲೂಕಿನ ಗ್ರಾಮ ಪಂಚಾಯಿತಿ ಚುನಾವಣೆಗಳ ನೋಡಲ್ ಅಧಿಕಾರಿ ಆಗಿರುವ ಉಪವಿಭಾಗಾಧಿಕಾರಿ ಡಾ. ಗೋಪಾಲ ಕೃಷ್ಣ ಬಿ. ಅವರು ಇಂದು ಮುಗದ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದರು.

ABOUT THE AUTHOR

...view details