ಕರ್ನಾಟಕ

karnataka

ETV Bharat / state

ಬೆಣ್ಣಿಹಳ್ಳ ಪಾತ್ರದ 13 ಹಳ್ಳಿಗಳಿಗೆ ನೋಡಲ್ ಅಧಿಕಾರಿಗಳ ನೇಮಕ

ಮುಂಗಾರು ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತು ಇಂದು ಮಿನಿ ವಿಧಾನ ಸೌಧದಲ್ಲಿ ನೋಡಲ್ ಅಧಿಕಾರಿಗಳ ಸಭೆ ನಡೆಯಿತು.

Meeting
Meeting

By

Published : Aug 7, 2020, 7:11 PM IST

Updated : Aug 7, 2020, 7:20 PM IST

ಹುಬ್ಬಳ್ಳಿ:ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ ಗ್ರಾಮಾಂತರ ತಾಲೂಕಿನ ಬೆಣ್ಣಿಹಳ್ಳ ಪಾತ್ರದ 13 ಹಳ್ಳಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಹಶೀಲ್ದಾರ ಪ್ರಕಾಶ ನಾಸಿ ಹೇಳಿದರು.

ಮುಂಗಾರು ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತು ಇಂದು ಮಿನಿ ವಿಧಾನ ಸೌಧದಲ್ಲಿ ಜರುಗಿದ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಹ ನಿರ್ವಹಣೆಗಾಗಿ ಗ್ರಾಮ ಮಟ್ಟದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ. ಇದರೊಂದಿಗೆ ಗ್ರಾಮದ ಯುವಕರು, ಹಿರಿಯರನ್ನು ಒಳಗೊಂಡ ಸ್ವಯಂ ಸೇವಕರ ತಂಡ ರಚಿಸಲಾಗಿದೆ. ನೋಡಲ್ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಪ್ರವಾಹದ ಕುರಿತು ಸಭೆ ನಡೆಸಬೇಕು ಎಂದರು.

ಗ್ರಾಮದಲ್ಲಿ ವಾಸಿಸುವ ಪ್ರತಿಯೊಬ್ಬರ ವಿವರ ಸಂಗ್ರಹಿಸಬೇಕು. ಮಹಿಳೆಯರು ಮಕ್ಕಳು ಹಾಗೂ ಗರ್ಭಿಣಿಯರ ಮಾಹಿತಿ ಸಂಗ್ರಹಿಸಬೇಕು‌. ಹಳ್ಳದ ಪಾತ್ರದಲ್ಲಿ ಅಪಾಯ ಮಟ್ಟಕ್ಕೆ ಸಿಲುಕುವ ವಸತಿಗಳಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು‌. ಶಿಥಿಲಗೊಂಡು ಮಳೆಯಿಂದ ಹಾನಿಗೆ ಒಳಗಾಗುವ ಮನೆಗಳನ್ನು ಸಹ ಗುರುತಿಸಬೇಕು. ಅಗತ್ಯ ಕಂಡುಬಂದರೆ ಅಂತಹ ಮನೆಗಳಿಂದಲೂ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಬೇಕು ಎಂದರು.

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮಳೆಯಿಂದ ಹಾನಿಗೆ ಒಳಗಾದ ಮನೆಗಳ ವಿವರವನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಇಂಜಿನಿಯರ್ ಜಂಟಿಯಾಗಿ ಸ್ಥಳ ಪರಿಶೀಲನೆ ನೆಡೆಸಿ, ಶೇಕಡಾವಾರು ಹಾನಿಯ ಮಾಹಿತಿಯನ್ನು 24 ಗಂಟೆಯ ಒಳಗಾಗಿ ನೀಡಬೇಕು. ಜಾನುವಾರುಗಳ ಮಾಹಿತಿ ಸಂಗ್ರಹಿಸಿ ಅಗತ್ಯ ಲಸಿಕೆ ಹಾಗೂ ಔಷಧಿಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಬೇಕು. ಗ್ರಾಮದಲ್ಲಿನ ಉತ್ತಮ ಈಜುಗಾರರು, ಜಿ.ಸಿ.ಬಿ. ಟ್ಯಾಕ್ಟರ್ ಮಾಲೀಕರ ವಿವರ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

ಸಭೆಯಲ್ಲಿ ಹುಬ್ಬಳ್ಳಿ ಗ್ರಾಮಾಂತರ ತಾಲೂಕಿನ ನೋಡಲ್ ಅಧಿಕಾರಿಗಳಾದ ಕೃಷಿ ಇಲಾಖೆ ಉಪನಿರ್ದೇಶಕ ಮಂಜುನಾಥ ಅಂತರವಳ್ಳಿ ಉಪಸ್ಥಿತರಿದ್ದರು.

Last Updated : Aug 7, 2020, 7:20 PM IST

ABOUT THE AUTHOR

...view details