ಹುಬ್ಬಳ್ಳಿ/ಧಾರವಾಡ : ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್ಗೆ ಅವಳಿ ನಗರ ಹುಬ್ಬಳ್ಳಿ ಧಾರವಾಡದಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ.
ಅವಳಿ ನಗರಗಳಲ್ಲಿ ಕರ್ನಾಟಕ ಬಂದ್ಗೆ ಇಲ್ಲ ಬೆಂಬಲ - No Bandh in Hubli Dharawad
ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್ಗೆ ಅವಳಿ ನಗರ ಹುಬ್ಬಳ್ಳಿ ಧಾರವಾಡದಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ.
![ಅವಳಿ ನಗರಗಳಲ್ಲಿ ಕರ್ನಾಟಕ ಬಂದ್ಗೆ ಇಲ್ಲ ಬೆಂಬಲ No Support for Karnataka Bandh in Hubli Dharwad](https://etvbharatimages.akamaized.net/etvbharat/prod-images/768-512-6054585-thumbnail-3x2-hrs.jpg)
ನಗರದ ವಿವಿಧ ಸಂಘಟನೆಗಳಾದ ಆಟೋ ಚಾಲಕರ ಸಂಘ, ಬಸ್ ಚಾಲಕರ ಸಂಘ, ಹಮಾಲರ ಸಂಘ, ಹೋಟೆಲ್ ಮಾಲೀಕರ ಸಂಘ, ಕರವೇ ನಾರಾಯಣ ಗೌಡ, ಪ್ರವೀಣ ಶೆಟ್ಟಿ ಬಣ, ಕಟ್ಟಡ ಕಾರ್ಮಿಕರ ಸಂಘ, ದಲಿತಪರ ಸಂಘಟನೆಗಳು ಸೇರಿದಂತೆ ಯಾರೂ ಬಂದ್ಗೆ ಬೆಂಬಲ ಸೂಚಿಸಿಲ್ಲ. ಹೀಗಾಗಿ ನಗರದಲ್ಲಿ ಯಥಾ ಸ್ಥಿತಿಯಲ್ಲಿ ವಾಹನ ಸಂಚಾರವಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿಯೂ ಯಾವುದೇ ವ್ಯತ್ಯಯ ಆಗಿಲ್ಲ. ಎರಡೂ ನಗರಗಳ ಶಾಲಾ - ಕಾಲೇಜುಗಳು, ಅಂಗಡಿ -ಮುಂಗಟ್ಟುಗಳು ಎಂದಿನಂತೆ ತೆರೆದಿವೆ.
ಹುಬ್ಬಳ್ಳಿ ನಗರದಲ್ಲಿ ಮಾತ್ರ ಕರ್ನಾಟಕ ಸಂಗ್ರಾಮ ಸೇನೆ ಸಂಘಟನೆ ಒಂದೆ ಬಂದ್ಗೆ ಬೆಂಬಲ ನೀಡಿದ್ದು, ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ಗೆ ಮನವಿ ಸಲ್ಲಿಸಲಿದ್ದಾರೆ.