ಹುಬ್ಬಳ್ಳಿ:ಯಾವುದೇ ಕಾರಣಕ್ಕೂ ಹೆಚ್ಡಿಕೆ ನಾಯಕತ್ವದ ಬಗ್ಗೆ ಯಾರೂ ಪ್ರಶ್ನೆ ಮಾಡಿಲ್ಲ ಎಂದು ಮಾಜಿ ಸಭಾಪತಿ,ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅಸಮಾಧಾನ ಹೊರ ಹಾಕಿದ್ದಾರೆ.
'ಪಕ್ಷದ ಆಂತರಿಕ ಕಲಹಗಳು ದೂರವಾಗಬೇಕು, ಇಲ್ಲದಿದ್ದರೆ ವಿಚಾರ ಮಾಡ್ತೀವಿ' - JDS leader Basavaraj horatti
ಯಾವುದೇ ಕಾರಣಕ್ಕೂ ಹೆಚ್ಡಿಕೆ ನಾಯಕತ್ವದ ಬಗ್ಗೆ ಯಾರೂ ಪ್ರಶ್ನೆ ಮಾಡಿಲ್ಲ ಎಂದು ಮಾಜಿ ಸಭಾಪತಿ, ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅಸಮಾಧಾನ ಹೊರ ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿಯವರು ಮೈತ್ರಿ ಸರ್ಕಾರದಲ್ಲಿ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ. ಜೆಡಿಎಸ್ ಪಕ್ಷದಲ್ಲಿನ ನ್ಯೂನತೆಗಳನ್ನು 11 ಎಂಎಲ್ಸಿಗಳು ವರಿಷ್ಠರಿಗೆ ಹೇಳಿದ್ದೇವೆ. ಪಕ್ಷದಲ್ಲಿರುವ ನ್ಯೂನತೆಯನ್ನ ಜೆಡಿಎಸ್ ವರಿಷ್ಠ ದೇವೇಗೌಡರು ಸರಿಪಡಿಸುತ್ತೇನೆ ಎಂದಿದ್ದಾರೆ. ಜೆಡಿಎಸ್‌ನ ಆಂತರಿಕ ಕಲಹ ಸರಿಯಾಗಬೇಕು. ಇಲ್ಲದಿದ್ರೆ ಮುಂದೆ ನಾವು ವಿಚಾರ ಮಾಡ್ತೀವಿ ಎಂದು ಇದೇ ವೇಳೆ ಅವರು ಎಚ್ಚರಿಕೆ ಕೊಟ್ಟರು.
ಸಾರಾ ಮಹೇಶ್ ಹಾಗೂ ಹೆಚ್.ವಿಶ್ವನಾಥ್ ಆಣೆ ಪ್ರಮಾಣ ವಿಚಾರವಾಗಿ ಮಾತನಾಡಿದ ಹೊರಟ್ಟಿ, ರಾಜಕಾರಣವನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಬಾರದು. ಆಣೆ ಪ್ರಮಾಣ ವಿಚಾರ ನಿಲ್ಲಿಸಲು ಇಬ್ಬರಿಗೂ ಹೇಳಿದ್ದೇನೆ. ಸುಮ್ಮನೆ ಪ್ರಾಬ್ಲಮ್ ಕ್ರಿಯೇಟ್ ಮಾಡಬೇಡಿ ಎಂದು ಹೇಳಿದ್ದೇನೆ ಎಂದರು.