ಕರ್ನಾಟಕ

karnataka

ETV Bharat / state

200 ಕೋಟಿ ಟೆಂಡರ್​​​ನಲ್ಲಿ ವಿದೇಶಿ ಸಹಭಾಗಿತ್ವ ಇಲ್ಲ: ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ - Union Minister Prahlada Joshi pressmeet in hubli

ವಾಣಿಜ್ಯ ಚಟುವಟಿಕೆಗಳ ಮೇಲೆಯೂ ಕೂಡ ಹೊಡೆತ ಬಿದ್ದಿದ್ದು, ಈ ನಿಟ್ಟಿನಲ್ಲಿ ದೇಶದ ಎರಡು ನೂರು ಕೋಟಿ ಮೊತ್ತದ ಟೆಂಡರ್​​ಗಳನ್ನು ದೇಶದಲ್ಲಿಯೇ ನೀಡುವಂತೆ ಚಿಂತನೆ ನಡೆಸಲಾಗಿದೆ. ಅದರಂತೆ ಸ್ವದೇಶಾಭಿವೃದ್ಧಿ ಹಿನ್ನೆಲೆಯಲ್ಲಿ ಹಲವಾರು ನಿರ್ಧಾರಗಳ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ ಜೋಶಿ

By

Published : Jul 10, 2020, 5:44 PM IST

ಹುಬ್ಬಳ್ಳಿ: ಸ್ವದೇಶಿ ಅಭಿವೃದ್ಧಿ ದೃಷ್ಟಿಯಿಂದ ದೇಶದಲ್ಲಿ ಎರಡು ನೂರು ಕೋಟಿ ಮೊತ್ತದ ಎಲ್ಲಾ ಟೆಂಡರ್​ಗಳನ್ನು ಭಾರತದಲ್ಲಿಯೇ ನೀಡಬೇಕು. ಇಲ್ಲಿ ಯಾವುದೇ ವಿದೇಶದ ಸಹಭಾಗಿತ್ವ ಬೇಡ. ಅಲ್ಲದೆ ಎರಡು ನೂರು ಕೋಟಿ ನಂತರದ ಟೆಂಡರ್​ಗಳಲ್ಲಿ ಕೂಡ ದೇಶದ ಉದ್ಯಮಗಳು ಹಾಗೂ ಉತ್ಪಾದನೆಗೆ ಆದ್ಯತೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಸುದ್ದಿಗೋಷ್ಠಿ

ನಗರದ ಬಿವಿಬಿ ಕಾಲೇಜಿನ ಬಯೋಟೆಕ್ ಸಭಾಂಗಣದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಾಕ್​​ಡೌನ್ ಹಿನ್ನೆಲೆಯಲ್ಲಿ ದೇಶ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸಿದೆ. ಅಲ್ಲದೆ ವಾಣಿಜ್ಯ ಚಟುವಟಿಕೆಗಳ ಮೇಲೆಯೂ ಕೂಡ ಹೊಡೆತ ಬಿದ್ದಿದ್ದು, ಈ ನಿಟ್ಟಿನಲ್ಲಿ ದೇಶದ ಎರಡು ನೂರು ಕೋಟಿ ಮೊತ್ತದ ಟೆಂಡರ್​​ಗಳನ್ನು ದೇಶದಲ್ಲಿಯೇ ನೀಡುವಂತೆ ಚಿಂತನೆ ನಡೆಸಲಾಗಿದೆ. ಅದರಂತೆ ಸ್ವದೇಶಾಭಿವೃದ್ಧಿ ಹಿನ್ನೆಲೆಯಲ್ಲಿ ಹಲವಾರು ನಿರ್ಧಾರಗಳ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

ಕೊರೊನಾ ವೈರಸ್ ಭೀತಿಯಿಂದ ಸಾಕಷ್ಟು ಸಮಸ್ಯೆಗಳಿಗೆ ಸಿಲುಕಿದ್ದ ಎಂಎಸ್ಎಂಇಗಳಿಗೆ ಆತ್ಮ ನಿರ್ಭರ ಭಾರತ ಯೋಜನೆಯಡಿ ನೆರವು ನೀಡಲು ಮೂರು ಲಕ್ಷ ಕೋಟಿ ರೂಪಾಯಿಗಳ ಕೊಲ್ಯಾಟ್ರಲ್ ಉಚಿತ ಸಾಲ ನೀಡುವ ಭರವಸೆ ನೀಡಲಾಗಿದೆ. ಅಲ್ಲದೆ ಮೂವತ್ತು ಲಕ್ಷಕ್ಕೂ ಅಧಿಕ ಎಂಎಸ್ಎಂಇ ಮತ್ತು ಇತರೆ ವ್ಯವಹಾರಗಳ ಘಟಕಗಳಿಗೆ 1.10 ಲಕ್ಷ ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಜೂ. 24ರಂದು ಎಂಎಸ್ಎಂಇಗಳಿಗೆ ಸಂಕಷ್ಟಕ್ಕೆ ಸಿಲುಕಿರುವ ಸ್ವತ್ತುಗಳ ನಿಧಿ ಅಧೀನ ಸಾಲ ಯೋಜನೆ ಆರಂಭ ಮಾಡಲಾಗಿದೆ ಎಂದು ಹೇಳಿದರು.

ABOUT THE AUTHOR

...view details