ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿಯೂ ಬೆಡ್ ಫುಲ್ : ಆಕ್ಸಿಜನ್,ವೆಂಟಿಲೇಟರ್ ಸಿಗಲ್ಲ ಹುಷಾರ್​.. - ಹುಬ್ಬಳ್ಳಿಯ ಆಸ್ಪತ್ರೆಗಳಲ್ಲಿ ಬೆಡ್​ ಕೊರತೆ

ಮದರ್ ಅಂಡ್ ಚೈಲ್ಡ್ ಹೆಲ್ತ್ ಕೇರ್ ಸೆಂಟರ್ ಕೂಡ ಚಿಕಿತ್ಸೆಗೆ ಮೀಸಲಿಡಲು ನಿರ್ಧಾರ ಕೈಗೊಳ್ಳಲಾಗಿದೆ. ಎಷ್ಟೇ ಬೆಡ್ ವ್ಯವಸ್ಥೆ ಮಾಡಿದರೂ ಸೋಂಕಿತರು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಇದು ಕೂಡ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ತಲೆ ನೋವಾಗಿದೆ‌..

bed
bed

By

Published : May 7, 2021, 7:44 PM IST

Updated : May 7, 2021, 9:33 PM IST

ಹುಬ್ಬಳ್ಳಿ: ಇಷ್ಟು ದಿನ ಬೆಂಗಳೂರು ಹಾಗೂ ಇನ್ನಿತರ ದೊಡ್ಡ ದೊಡ್ಡ ನಗರದಲ್ಲಿ ಉದ್ಭವಿಸಿದ್ದ ಆಸ್ಪತ್ರೆ ಬೆಡ್​ ಸಮಸ್ಯೆ ಈಗ ವಾಣಿಜ್ಯನಗರಿ ಹುಬ್ಬಳ್ಳಿಗೂ ಎದುರಾಗಿದೆ.

ಕೊರೊನಾ ವೈರಸ್ ಎರಡನೇ ಅಲೆಯ ತೀವ್ರತೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗ ಹುಬ್ಬಳ್ಳಿಯಲ್ಲಿ ಸರ್ಕಾರಿ ಸೇರಿ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಫುಲ್ ಆಗಿವೆ. ಇನ್ನೂ ಬೆರಳೆಣಿಕೆಯ ಒಂದೆರಡು ಆಸ್ಪತ್ರೆಯಲ್ಲಿ ಒಂದೊ ಎರಡೋ ಬೆಡ್ ಮಾತ್ರ ಲಭ್ಯವಿದ್ದು, ಎಲ್ಲ ಕಡೆಯೂ ಬೆಡ್ ಫುಲ್ ಆಗಿದೆ ಎಂಬ ಮಾತುಗಳೇ ಕೇಳಿ ಬರುತ್ತಿವೆ.

ಹುಬ್ಬಳ್ಳಿಯಲ್ಲಿಯೂ ಬೆಡ್ ಫುಲ್ : ಆಕ್ಸಿಜನ್,ವೆಂಟಿಲೇಟರ್ ಸಿಗಲ್ಲ ಹುಷಾರ್​..

ಖಾಸಗಿ ಆಸ್ಪತ್ರೆಯಲ್ಲಿ ಅರ್ಧದಷ್ಟು ಬೆಡ್ ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ. ಅಲ್ಲದೇ ಕಿಮ್ಸ್ ಸಂಪೂರ್ಣ ಕೋವಿಡ್ ಆಸ್ಪತ್ರೆ ಮಾಡಿದ್ದು, ಈಗ ಎಲ್ಲೆಡೆಯೂ ಬೆಡ್ ಫುಲ್ ಆಗಿವೆ. ಆಕ್ಸಿಜನ್ ಬೆಡ್ ಅಂತೂ ಕೇಳಲೇಬೇಡಿ. ವೆಂಟಿಲೇಟರ್ ಮಾತ್ರ ಸಿಗುವುದೇ ಇಲ್ಲ.

ಈಗಾಗಲೇ ಜಿಲ್ಲಾಡಳಿತದ ನೇತೃತ್ವದಲ್ಲಿ ಕಿಮ್ಸ್​ನಲ್ಲಿ 60 ಬೆಡ್ ನಿರ್ಮಾಣದ ತಾತ್ಕಾಲಿಕ ತುರ್ತು ಚಿಕಿತ್ಸಾ ಘಟಕ ಪ್ರಾರಂಭ ಮಾಡಲು ಚಿಂತನೆ ನಡೆಸಿದೆ. ಅಲ್ಲದೇ ಕೆಎಲ್ಇ ಶಿಕ್ಷಣ ಸಂಸ್ಥೆ ಕೂಡ 80 ಆಕ್ಸಿಜನ್ ಸಹಿತ ಬೆಡ್ ಕೋವಿಡ್ ಸೆಂಟರ್ ಪ್ರಾರಂಭ ಮಾಡುತ್ತಿದೆ.

ಅಷ್ಟೆ ಅಲ್ಲದೇ ಮದರ್ ಅಂಡ್ ಚೈಲ್ಡ್ ಹೆಲ್ತ್ ಕೇರ್ ಸೆಂಟರ್ ಕೂಡ ಚಿಕಿತ್ಸೆಗೆ ಮೀಸಲಿಡಲು ನಿರ್ಧಾರ ಕೈಗೊಳ್ಳಲಾಗಿದೆ. ಎಷ್ಟೇ ಬೆಡ್ ವ್ಯವಸ್ಥೆ ಮಾಡಿದರೂ ಸೋಂಕಿತರು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಇದು ಕೂಡ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ತಲೆ ನೋವಾಗಿದೆ‌.

Last Updated : May 7, 2021, 9:33 PM IST

ABOUT THE AUTHOR

...view details