ಕರ್ನಾಟಕ

karnataka

ETV Bharat / state

ವಿಮೆ ಹೊಂದಿದ್ದ ಎಮ್ಮೆ ಸಾವು: ಪರಿಹಾರ ನಿರಾಕರಿಸಿದ ಕಂಪನಿಗೆ 95 ಸಾವಿರ ರೂ.ದಂಡ - ಈಟಿವಿ ಭಾರತ್​ ಕನ್ನಡ

ವಿಮೆ ಹೊಂದಿದ್ದ ಎಮ್ಮೆಯೊಂದು ಕಾಯಿಲೆಗೆ ತುತ್ತಾಗಿ ಮರಣ ಹೊಂದಿದ್ದು, ವಿಮಾ ಕಂಪನಿ ಪರಿಹಾರ ನೀಡಲು ನಿರಾಕರಿಸಿದೆ. ಹೀಗಾಗಿ ಜಿಲ್ಲಾ ಗ್ರಾಹಕ ವ್ಯವಹಾರಗಳ ಪರಿಹಾರ ಆಯೋಗವು 95 ಸಾವಿರ ರೂ.ದಂಡ ವಿಧಿಸಿದೆ.

KN_DWD_2_buffelo_fenalty_KA10001
ಸಾಂದರ್ಭಿಕ ಚಿತ್ರ

By

Published : Aug 11, 2022, 9:21 PM IST

ಧಾರವಾಡ:ವಿಮಾ ಪಾಲಿಸಿ ಹೊಂದಿದ ಎಮ್ಮೆಯೊಂದು ಕಾಯಿಲೆಯಿಂದ ಮರಣ ಹೊಂದಿದ ಬಗ್ಗೆ ಪೂರಕ ದಾಖಲೆಗಳೊಂದಿಗೆ ಮಾಹಿತಿ ನೀಡಿದರೂ ಪರಿಹಾರ ಪಾವತಿಸದ ವಿಮಾ ಕಂಪೆನಿಗೆ ಇಲ್ಲಿನ ಜಿಲ್ಲಾ ಗ್ರಾಹಕ ವ್ಯವಹಾರಗಳ ಪರಿಹಾರ ಆಯೋಗ 95 ಸಾವಿರ ರೂ.ದಂಡ ಹಾಕಿದೆ.

ಧಾರವಾಡ ತಾಲೂಕಿನ ನೀರಲಕಟ್ಟಿ ಗ್ರಾಮದ ಮುತ್ತಪ್ಪ ತಪೇಲಿ ಎಂಬುವರು ವಿಮಾ ಪಾಲಿಸಿ ಹೊಂದಿದ್ದ ಎಮ್ಮೆ ಖಾಯಿಲೆಯಿಂದ ಮರಣ ಹೊಂದಿದರೂ ಕೂಡ ಯುನಿವೆರಲ್ ಸೊಂಪೊ ಜನರಲ್ ಇನ್ಸೂರೆನ್ಸ್ ಕಂಪನಿಯವರು ಪರಿಹಾರ ನೀಡಿಲ್ಲ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ನೀಡಿದ್ದರು.

ಈ ಕುರಿತ ವಿಚಾರಣೆ ನಡೆಸಿದ ಆಯೋಗವು, ಎಮ್ಮೆಯ ಮೇಲಿನ ವಿಮಾ ಮೊತ್ತವನ್ನು ಫಿರ್ಯಾದಿಗೆ ನೀಡುವಲ್ಲಿ ಕರ್ತವ್ಯ ಲೋಪ ಎಸಗಿ ಸೇವಾ ನ್ಯೂನತೆ ಮಾಡಿದ ವಿಮಾ ಕಂಪನಿಗೆ ದಂಡ ವಿಧಿಸಿದೆ. 30 ದಿನಗಳೊಳಗಾಗಿ ಆದೇಶ ಪಾಲನೆ ಮಾಡಬೇಕು ಎಂದು ಆಯೋಗದ ಅಧ್ಯಕ್ಷ ಈಶಪ್ಪ ಕ ಭೂತೆ, ಸದಸ್ಯರಾದ ಪ್ರಭು ಹಿರೇಮಠ ಆದೇಶಿಸಿದ್ದಾರೆ.

ಇದನ್ನೂ ಓದಿ:ಎಸಿಬಿ ರಚನೆ ರದ್ದು: ಹೈಕೋರ್ಟ್ ನಡೆಗೆ ಸಂತೋಷ್ ಹೆಗ್ಡೆ ಹೇಳಿದ್ದೇನು?

ABOUT THE AUTHOR

...view details