ಧಾರವಾಡ:ಮಹಾನಗರದ ನೂತನ ಪೊಲೀಸ್ ಆಯುಕ್ತರಾಗಿ ಆರ್.ದಿಲೀಪ್ ಇಂದು ಅಧಿಕಾರ ಸ್ವೀಕರಿಸಿದರು.
ಹುಬ್ಬಳ್ಳಿ-ಧಾರವಾಡ ನೂತನ ಪೊಲೀಸ್ ಆಯುಕ್ತರಾಗಿ ದಿಲೀಪ್ ಅಧಿಕಾರ ಸ್ವೀಕಾರ - ನೂತನ ಕಮೀಷನರ್ ಆಗಿ ದಿಲೀಪ್
ಹುಬ್ಬಳ್ಳಿ-ಧಾರವಾಡ ಮಹಾನಗರದ ಪೊಲೀಸ್ ಆಯುಕ್ತರಾಗಿದ್ದ ಎಂ.ಎನ್.ನಾಗರಾಜ ಡೆಪ್ಯೂಟಿ ಐಜಿಪಿಯಾಗಿ ಬಡ್ತಿ ಹೊಂದಿದ್ದು, ಆ ಸ್ಥಾನಕ್ಕೆ ಆರ್.ದಿಲೀಪ್ ನೂತನವಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ಆರ್.ದೀಲಿಪ್
ಪೊಲೀಸ್ ಆಯುಕ್ತರಾಗಿದ್ದ ಎಂ.ಎನ್.ನಾಗರಾಜ ಅವರು ನೂತನ ಕಮೀಷನರ್ ದಿಲೀಪ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಇದೇ ವೇಳೆ ಅಧಿಕಾರ ಸ್ವೀಕರಿಸಿದ ಆರ್.ದಿಲೀಪ್, ಡೆಪ್ಯೂಟಿ ಐಜಿಪಿಯಾಗಿ ಬಡ್ತಿ ಹೊಂದಿದ ಎಂ.ಎನ್.ನಾಗರಾಜ ಅವರಿಗೆ ಅಭಿನಂದನೆ ಸಲ್ಲಿಸಿದರು.
ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ಗೆ ಹೊಸ ಸಾರಥಿಯಾಗಿ ಆರ್.ದಿಲೀಪ್ ಅಧಿಕಾರ ಸ್ವೀಕರಿಸಿದ್ದು, ಈ ಮೊದಲು ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿ ಆಗಿ ಹಾಗೂ ಧಾರವಾಡ ಜಿಲ್ಲಾ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.