ಧಾರವಾಡ:ನಗರದ ನೂತನ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಇಂದು ಅಧಿಕಾರ ಸ್ವೀಕರಿಸಿಕೊಂಡರು. ದೀಪಾ ಚೋಳನ್ ಅವರಿಂದ ಅಧಿಕಾರ ಸ್ವೀಕಾರ ಮಾಡಿಕೊಂಡರು.
ದೀಪಾ ಚೋಳನ್ಗೆ ಬೈ ಬೈ ಹೇಳಿದ ಧಾರವಾಡ ಮಂದಿ, ಹೊಸ ಜಿಲ್ಲಾಧಿಕಾರಿ ಅಧಿಕಾರ ಸ್ವೀಕಾರ - ಜಿಲ್ಲಾಧಿಕಾರಿ ದೀಪಾ ಚೋಳನ್
ರಾಜ್ಯ ಸರ್ಕಾರ ದೀಪಾ ಚೋಳನ್ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿತ್ತು. ಆ ಹಿನ್ನೆಲೆ ಡಿಸಿ ಕಚೇರಿಯಲ್ಲಿ ನೂತನ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅಧಿಕಾರ ಸ್ವೀಕಾರ ಸ್ವೀಕರಿಸಿದರು.
![ದೀಪಾ ಚೋಳನ್ಗೆ ಬೈ ಬೈ ಹೇಳಿದ ಧಾರವಾಡ ಮಂದಿ, ಹೊಸ ಜಿಲ್ಲಾಧಿಕಾರಿ ಅಧಿಕಾರ ಸ್ವೀಕಾರ dc](https://etvbharatimages.akamaized.net/etvbharat/prod-images/768-512-7832850-708-7832850-1593514226419.jpg)
dc
ನಿನ್ನೆ ರಾಜ್ಯ ಸರ್ಕಾರ ದೀಪಾ ಚೋಳನ್ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿತ್ತು. ಆ ಹಿನ್ನೆಲೆ ಡಿಸಿ ಕಚೇರಿಯಲ್ಲಿ ನೂತನ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅಧಿಕಾರ ಸ್ವೀಕಾರ ಸ್ವೀಕರಿಸಿದರು.
ಜಿಲ್ಲಾಧಿಕಾರಿ ಅಧಿಕಾರ ಸ್ವೀಕಾರ
ಧಾರವಾಡದ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ನಮಗೆ ಸವಾಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಚೆನ್ನಾಗಿ ನಿಯಂತ್ರಣ ಮಾಡಲಾಗಿದೆ. ಜಿಲ್ಲಾಡಳಿತದಲ್ಲಿ ಒಳ್ಳೆಯ ತಂಡವಿದೆ. ಜನರಿಂದ ಒಳ್ಳೆಯ ಸ್ಪಂದನೆ ಇದೆ, ಆತ್ಮವಿಶ್ವಾಸದಿಂದ ಇದನ್ನು ಎದುರಿಸಬೇಕಿದೆ ಎಂದು ಹೇಳಿದರು..