ಕರ್ನಾಟಕ

karnataka

ETV Bharat / state

ನವಜಾತ ಶಿಶುವಿಗೂ ಕೊರೊನಾ ಸೋಂಕು: ಕಿಮ್ಸ್​ನಲ್ಲಿ ಚಿಕಿತ್ಸೆ - ಹುಬ್ಬಳ್ಳಿ ಕೊರೊನಾ

ಹುಟ್ಟಿದ ಒಂದು ದಿನಕ್ಕೇ ಮಗುವಿಗೂ ಕೊರೊನಾ ಇರುವುದು ದೃಢಪಟ್ಟಿದ್ದು, ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಒಂದು ದಿನದ ಮಗುವಿಗೂ ಕೊರೊನಾ ಸೋಂಕು
ಒಂದು ದಿನದ ಮಗುವಿಗೂ ಕೊರೊನಾ ಸೋಂಕು

By

Published : Jul 1, 2020, 9:43 AM IST

ಹುಬ್ಬಳ್ಳಿ: ಕೋವಿಡ್ ಪಾಸಿಟಿವ್ ಹೊಂದಿದ್ದ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿದ್ದು, ಹುಟ್ಟಿದ ಒಂದು ದಿನಕ್ಕೇ ಮಗುವಿಗೂ ಸೋಂಕು ತಗುಲಿದೆ.

ಹುಬ್ಬಳ್ಳಿ ತಾಲೂಕು ಉಮಚಗಿ ಗ್ರಾಮದ ಗರ್ಭಿಣಿಗೆ (ಪಿ-10800, 25 ವರ್ಷ) 39 ವಾರಗಳು ಹಾಗೂ 4 ದಿನಗಳು ಪೂರ್ಣಗೊಂಡಿತ್ತು. ಆದರೂ ಸಹಜ ಹೆರಿಗೆ ಸಾಧ್ಯವಿಲ್ಲದ ಲಕ್ಷಣಗಳು ಗೋಚರಿಸಿದ್ದ ಕಾರಣ ಆಕೆಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಇದರಲ್ಲಿ ಕಿಮ್ಸ್ ವೈದ್ಯರ ತಂಡ ಯಶಸ್ವಿಯಾಗಿತ್ತು.

ಆಕೆ 3.5 ಕೆ.ಜಿ. ತೂಕದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಸೋಂಕಿತ ಮಗು ಪಿ-14522 ರೋಗಿಯಾಗಿದೆ.

ABOUT THE AUTHOR

...view details