ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದ ಅಣ್ಣಿಗೇರಿ ತಾಲೂಕಿನ ನೂತನ ತಾಲೂಕು ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಇಂದು ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಎರಡೂ ಸ್ಥಾನಗಳೂ ಸಹ ಜೆಡಿಎಸ್ ಪಕ್ಷದ ಪಾಲಾಗಿವೆ.
ಅಧ್ಯಕ್ಷರಾಗಿ ಇಬ್ರಾಹಿಂಪೂರ ತಾಲೂಕು ಪಂಚಾಯತ್ ಸದಸ್ಯ ಮಲ್ಲರಡ್ಡಿ ಕುರಹಟ್ಟಿ ಅಯ್ಕೆಯಾದರು.
ಉಪಾಧ್ಯಕ್ಷರಾಗಿ ಭದ್ರಾಪೂರ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ನಿರ್ಮಲಾ ಹನಮಂತ ಗಾಣಿಗೇರ ಕೂಡಾ ಅವಿರೋಧ ಆಯ್ಕೆಯಾಗಿದ್ದಾರೆ.
ಈ ಮೂಲಕ ಇಬ್ಬರೂ ನೂತನ ಅಣ್ಣಿಗೇರಿ ತಾಲೂಕು ಪಂಚಾಯತ್‌ನ ಮೊದಲ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿದ್ದಾರೆ.
ನವಲಗುಂದ ಮಾಜಿ ಶಾಸಕರು ಹಾಗೂ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ಹೆಚ್. ಕೋನರಡ್ಡಿ ಆಯ್ಕೆಯಾದ ಇಬ್ಬರಿಗೂ ಸಿಹಿ ಹಂಚುವುದರ ಮೂಲಕ ಶುಭಾಶಯ ಕೋರಿದರು.