ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ 8 ಜನ ಪೊಲೀಸರಿಗೆ ಅಂಟಿದ ಕೊರೊನಾ ಸೋಂಕು - ಹುಬ್ಬಳ್ಳಿ-ಧಾರವಾಡ ಕಮಿಷನರೇಟ್

ಹುಬ್ಬಳ್ಳಿ ಪೊಲೀಸರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಮತ್ತೆ ಒಂದೇ ದಿನ 8 ಪೊಲೀಸರಿಗೆ ವೈರಸ್​ ವಕ್ಕರಿಸಿದೆ.

ಪೊಲೀಸರಿಗೆ ಅಂಟಿದ ಕೊರೊನಾ ಸೋಂಕು
ಪೊಲೀಸರಿಗೆ ಅಂಟಿದ ಕೊರೊನಾ ಸೋಂಕು

By

Published : Jul 13, 2020, 8:32 AM IST

ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಪೊಲೀಸರಿಗೆ ಕೊರೊನಾ ಬೆಂಬಿಡದೇ ಕಾಡುತ್ತಿದೆ. ಒಂದೇ ದಿನ 8 ಜನ ಪೊಲೀಸರಿಗೆ ಕೊರೊನಾ ಧೃಡಪಟ್ಟಿದೆ.

ನಗರದ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಐದು ಜನ ಸಿಬ್ಬಂದಿಗೆ ಕೊರೊನಾ ಧೃಡಪಟ್ಟಿದೆ. ಇದೇ ಠಾಣೆಯ ಓರ್ವ ಹೋಮ್ ಗಾರ್ಡ್​ಗೆ ಕೊರೊನಾ ಧೃಡಪಟ್ಟಿದ್ದು, ನಿತ್ಯ ಜನಜಂಗುಳಿಯಿಂದ ಕೂಡುವ ಪ್ರದೇಶದಲ್ಲಿ ಘಂಟಿಕೇರಿ ಪೊಲೀಸ್ ಠಾಣೆ ಇದೆ. ಠಾಣೆ ಪಕ್ಕದಲ್ಲಿಯೇ ಗಾಂಧಿ ಬಜಾರ್​, ನಗರದ ಪ್ರಮುಖ ಮಾರುಕಟ್ಟೆಯಾಗಿರುವ ಸರಾಫಗಟ್ಟಿ ಪ್ರದೇಶಗಳು ಠಾಣೆ ವ್ಯಾಪ್ತಿಯಲ್ಲಿ ಬರುತ್ತವೆ. ಇದೀಗ ಈ ಠಾಣೆಯ ಐದು ಜನ ಸಿಬ್ಬಂದಿಗೆ ಕೊರೊನಾ ಧೃಡಪಟ್ಟಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಅಷ್ಟೇ ಅಲ್ಲದೆ ನಗರದ ಪೂರ್ವ ಸಂಚಾರ ಟ್ರಾಫಿಕ್ ಠಾಣೆಯ ಇಬ್ಬರು ಸಿಬ್ಬಂದಿಗೆ ಕೊರೊನಾ ಧೃಡಪಟ್ಟಿದೆ.‌

ಈಗಾಗಲೇ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ, ಉಪನಗರ ಠಾಣೆ, ಅಶೋಕನಗರ ಪೊಲೀಸ್ ಠಾಣೆ, ಶಹರ ಠಾಣೆಗಳಲ್ಲಿರುವ ಸಿಬ್ಬಂದಿಗೆ ಕೊರೊನಾ ಧೃಡಪಟ್ಟಿದ್ದು, ಪೊಲೀಸರು ಆತಂಕದಿಂದ ಕೆಲಸ ನಿರ್ವಹಿಸುವಂತಾಗಿದೆ.

ABOUT THE AUTHOR

...view details