ಹುಬ್ಬಳ್ಳಿ :ನೆಹರೂ ಮೈದಾನ ಅವ್ಯವಸ್ಥೆಯಿಂದ ತಲೆ ತಗ್ಗಿಸುವಂತಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮೈದಾನಕ್ಕೆ ಅತ್ಯಾಧುನಿಕ ಸ್ಪರ್ಶ ನೀಡಬೇಕೆಂದು ನೀಲನಕ್ಷೆ ತಯಾರಿಸಲಾಗಿದೆ.ವಾಣಿಜ್ಯನಗರಿ ಖ್ಯಾತಿಗೆ ಕಿರೀಟ ಇಟ್ಟಂತೆ ಈ ಯೋಜನೆ ತಲೆ ಎತ್ತಲಿದೆ. ಆದರೆ, ಈ ಕಾಮಗಾರಿ ಮಾತ್ರ ಚುರುಕುಗೊಂಡಿಲ್ಲ.
ಹುಬ್ಬಳ್ಳಿ-ಧಾರವಾಡ ಅವಳಿನಗರವನ್ನು ಸ್ಮಾರ್ಟ್ ಮಾಡಲು ಕೈಗೆತ್ತಿಕೊಂಡಿರುವ ಸ್ಮಾರ್ಟ್ ಸಿಟಿ ಯೋಜನೆ ತಕ್ಕಮಟ್ಟಿಗೆ ಇಲ್ಲಿನ ಜನರಿಗೆ ಉಪಯೋಗವಾಗಿದೆ. ಆದರೆ, ಹು-ಧಾ ಮಹಾನಗರ ಪಾಲಿಕೆಯ ನೆಹರು ಮೈದಾನಕ್ಕೆ ಮಾತ್ರ ಸ್ಮಾರ್ಟ್ ಸಿಟಿ ಯೋಜನೆ ನಿರ್ಲಕ್ಷ್ಯ ತೋರುತ್ತಿದೆ. ಹುಬ್ಬಳ್ಳಿ ಆಟಗಾರರ ಹಾಗೂ ಸಾರ್ವಜನಿಕರ ಬಹುನಿರೀಕ್ಷಿತ ನೆಹರು ಮೈದಾನದ ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭವಾಗಿ ಸುಮಾರು ದಿನಗಳೇ ಕಳೆದರೂ ಈವರೆಗೂ ಕಾಮಗಾರಿ ವೇಗ ಪಡೆದಿಲ್ಲ. ಹೀಗಾಗಿ, ಮೈದಾನ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ.