ಹುಬ್ಬಳ್ಳಿ:ಜನನಿಬಿಡ ಪ್ರದೇಶದಲ್ಲಿ ಇಂದೋ ನಾಳೆಯೋ ಬೀಳುವ ಹಂತದಲ್ಲಿರುವ ಕಟ್ಟಡವನ್ನ ತೆರವುಗಳಿಸದೆ ಪಾಲಿಕೆ ಅಧಿಕಾರಿಗಳು ತೆರಿಗೆ ವಸೂಲಿಗೆ ಮುಂದಾಗಿದ್ದಾರೆ.
ನಗರದ ದುರ್ಗದ್ ಬೈಲ್ ನಲ್ಲಿರುವ ವಾರ್ಡ್ ನಂ 45 ರಲ್ಲಿ ಕಟ್ಟಡವೊಂದು ಕುಸಿಯುವ ಹಂತ ತಲುಪಿದೆ. ಈ ಕಟ್ಟಡವನ್ನ ಪಾಲಿಕೆ ಅಧಿಕಾರಿಗಳು ತೆರವುಗೊಳಿಸದೆ ತೆರಿಗೆ ವಸೂಲಿಗೆ ನಿಂತಿದ್ದಾರೆ.
ಕಟ್ಟಡ ತೆರವುಗೊಳಿಸದ ಪಾಲಿಕೆ ಅಧಿಕಾರಿಗಳು ದಶಕಗಳಿಂದ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿದ್ದು, ಇದೀಗ ಕರದ ಬಾಕಿ ಹಣ 20 ಲಕ್ಷ ದಾಟಿದೆ. ಅಲ್ಲದೇ ಇತ್ತಿಚೆಗೆ ಪಾಲಿಕೆ ಅಧಿಕಾರಿಗಳು ಅವಳಿ ನಗರದ ಅನಧಿಕೃತ ಅಂಗಡಿಗಳಿಗೆ ನೋಟಿಸ್ ನೀಡಿ ಅಂಗಡಿಗಳನ್ನು ಸೀಜ್ ಮಾಡಿ ಬೀಗ ಜಡಿದಿದ್ದರು. ಆದರೆ ಕೆಲ ಬಿಲ್ಡರ್, ಜನಪ್ರತಿನಿಧಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡ ಹಾಗೂ ಲಂಚದ ಆಸೆಗಾಗಿ ಪಾಲಿಕೆ ಅಧಿಕಾರಿಗಳು ಲಕ್ಷಾಂತರ ರೂ. ವಸೂಲಿ ಮಾಡಬೇಕಾದ ಕರ ಬಾಕಿದಾರರಿಂದ ಕೇವಲ ನಾಮಕಾವಸ್ತೆಗೆ ಸಾವಿರಾರು ರೂಪಾಯಿ ಪಾವತಿ ಮಾಡಿಕೊಂಡು ಅಂಗಡಿ ನಡೆಸಲು ಅನುಮತಿ ನೀಡುವ ಹುನ್ನಾರದಲ್ಲಿದ್ದಾರೆಂದು ಆರೋಪಿಸಿದ್ದಾರೆ.
ಅಲ್ಲದೆ ಶಿಥಿಲಾವಸ್ಥೆಯ ಕಟ್ಟಡವನ್ನ ತೆರವುಗೊಳಿಸದೆ ಪಾಲಿಕೆ ಆ ಕಟ್ಟಡಕ್ಕೆ ನೋಟಿಸ್ ನೀಡಿ, ಕರ ವಸೂಲಿ ಮಾಡಲು ಮುಂದಾಗಿದೆ. ಆದ್ರೆ ಕಳೆದ ನಾಲ್ಕೈದು ತಿಂಗಳ ಹಿಂದಯೇ ಸ್ಥಳೀಯರು ಪಾಲಿಕೆಗೆ ದೂರು ನೀಡಿದ್ರು ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಹಣದಾಸಗೆ ಬೇರೆ ಕೆಲಸಕ್ಕೆ ಕೈ ಹಾಕಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಇನ್ನು ಕಟ್ಟಡದ ಮಾಲೀಕರುಅನಧಿಕೃತವಾಗಿ ಫುಟ್ ಪಾತ್ ಮೇಲಿನ ವ್ಯಾಪಾರಸ್ಥರಿಗೆ ಕಾನೂನು ಬಾಹಿರವಾಗಿ ವಿದ್ಯುತ್ ಸಂಪರ್ಕ ಒದಗಿಸುತ್ತಿದ್ದಾರೆ. ಇಷ್ಟೇಲ್ಲಾ ಅವ್ಯವಹಾರಗಳು ನಡೆಯುತ್ತಿದ್ದರೂ ಪಾಲಿಕೆ ಮತ್ತು ಹೆಸ್ಕಾಂ ಅಧಿಕಾರಿಗಳು ಜಾಣ ಮೌನ ವಹಿಸಿದ್ದು, ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಮುಂದಾಗುವ ಅನಾಹುತಗಳನ್ನು ಅರಿತು ಶಿಥಿಲಗೊಂಡ ಕಟ್ಟಡಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.