ಹುಬ್ಬಳ್ಳಿ: ಕಿಮ್ಸ್ನಲ್ಲಿ ಸಾವನ್ನಪ್ಪಿದ ಧಾರವಾಡದ ವ್ಯಕ್ತಿಯ ವರದಿ ನೆಗೆಟಿವ್ ಬಂದಿದೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಸ್ಪಷ್ಟಪಡಿಸಿದ್ದಾರೆ.
ಜಾಂಡೀಸ್‌ನಿಂದಾಗಿ ಧಾರವಾಡಕ್ಕೆ ಬಂದಿದ್ದ ಟೆಕಿ ಸಾವು: ಕಿಮ್ಸ್ ನಿರ್ದೇಶಕ - Negative in the report of a techie who died at Kim's
ಪುಣೆಯಿಂದ ಧಾರವಾಡಕ್ಕೆ ಬಂದು ಕಿಮ್ಸ್ನಲ್ಲಿ ಸಾವನ್ನಪ್ಪಿದ ಟೆಕಿಯ ವರದಿಯಲ್ಲಿ ನೆಗೆಟಿವ್ ಬಂದಿರುವುದಾಗಿ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯ ನಿವಾಸಿಯಾಗಿದ್ದ ಈತ ಜ್ವರ, ನೆಗಡಿ, ಕೆಮ್ಮು, ನ್ಯೂಮೋನಿಯಾದಿಂದಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ.
ಈತನಿಗೆ ಕೊರೊನಾ ಸೋಂಕು ತಗುಲಿರುವ ಅನುಮಾನದ ಹಿನ್ನಲೆ ವ್ಯಕ್ತಿಯ ರಕ್ತದ ಮಾದರಿ ಹಾಗೂ ಗಂಟಲಿನ ದ್ರವವನ್ನು ಶಿವಮೊಗ್ಗ ಲ್ಯಾಬ್‌ಗೆ ರವಾನಿಸಲಾಗಿತ್ತು. ಇದೀಗ ಲ್ಯಾಬ್ ನಿಂದ ನೆಗೆಟಿವ್ ವರದಿ ಬಂದಿದ್ದು, ಜಾಂಡಿಸ್ ನಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಸ್ಪಷ್ಟಪಡಿಸಿದ್ದಾರೆ.
Last Updated : Apr 4, 2020, 11:42 AM IST