ಹುಬ್ಬಳ್ಳಿ: ಸತತ 3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡ-ಕಲಘಟಗಿಯ ಜಿಲ್ಲಾ ಮುಖ್ಯ ರಸ್ತೆಯ ಸಂಚಾರ ಬಂದ್ ಆಗಿದೆ. ಕಲಘಟಗಿ ತಾಲೂಕಿನ ಗಂಬ್ಯಾಪುರ ಹತ್ತಿರದ ನೀರಸಾಗರ ಜಲಾಶಯ ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಳೆಗೆ ತುಂಬಿ ಹರಿಯುತ್ತಿದೆ.
ನೀರಸಾಗರ ಜಲಾಶಯ ಭರ್ತಿ: ಧಾರವಾಡ-ಕಲಘಟಗಿ ರಸ್ತೆ ಸಂಚಾರ ಬಂದ್ - Nilgassara Reservoir
3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ನೀರಸಾಗರ ಜಲಾಶಯ ಸಂಪೂರ್ಣ ತುಂಬಿದ್ದು, ಧಾರವಾಡ-ಕಲಘಟಗಿ ನಡುವಿನ ಸಂಚಾರ ಕಡಿತಗೊಂಡಿದೆ.

ಧಾರವಾಡ- ಕಲಘಟಗಿ ರಸ್ತೆ ಸಂಚಾರ ಬಂದ್
ಧಾರವಾಡ- ಕಲಘಟಗಿ ರಸ್ತೆ ಸಂಚಾರ ಬಂದ್
ಇದರಿಂದ ಧಾರವಾಡ-ಕಲಘಟಗಿ ರಸ್ತೆ ಸಂಚಾರ ಸಂಪೂರ್ಣ ಕಡಿತಗಿಗೊಂಡಿದೆ. ಕಲಘಟಗಿ ತಾಲೂಕಿನ ಗಂಬ್ಯಾಪುರ, ಮುತ್ತಗಿ, ಹುಲ್ಲಂಬಿ, ತುಮರಿಕೊಪ್ಪ ಮಾರ್ಗವಾಗಿ ಹೋಗುವ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದಲ್ಲದೆ ಕಲಘಟಗಿ, ಕುಂದಗೋಳ ತಾಲೂಕಿನಲ್ಲಿ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಅಲ್ಲದೆ ಮಳೆಯಿಂದಾಗಿ ಪ್ರವಾಹ ಭೀತಿ ಎದುರಾಗಿದೆ.