ಧಾರವಾಡ: ಮಲೆನಾಡಿನ ಪ್ರಸಿದ್ಧ ನೀರಾ ಈಗ ಉತ್ತರ ಕರ್ನಾಟಕದಲ್ಲಿ ಲಭ್ಯವಾಗಲಿದ್ದು, ಮೊದಲ ನೀರಾ ಪಾರ್ಲರ್ ನಗರದಲ್ಲಿ ಸಪ್ಟೆಂಬರ್ 20ರಂದು ಆರಂಭಗೊಳ್ಳುತ್ತಿದೆ.
ಮಲೆನಾಡಿನ ಪ್ರಸಿದ್ಧ ನೀರಾ ಇನ್ಮುಂದೆ ಧಾರವಾಡದಲ್ಲಿ ಲಭ್ಯ! - Neera Parlor in Dharwad
ಮಲೆನಾಡಿನ ಪ್ರಸಿದ್ಧ ನೀರಾ ಇನ್ಮುಂದೆ ಧಾರವಾಡದಲ್ಲಿ ಲಭ್ಯವಾಗಲಿದ್ದು, ಉತ್ತರ ಕರ್ನಾಟಕದ ಮೊದಲ ನೀರಾ ಪಾರ್ಲರ್ ಇದಾಗಲಿದೆ.
ಮಲೆನಾಡಿನ ಪ್ರಸಿದ್ದ ನೀರಾ ಇನ್ಮುಂದೆ ಧಾರವಾಡದಲ್ಲಿ ಲಭ್ಯ...!
ಮಲೆನಾಡು ನಟ್ಸ್ ಅಂಡ್ ಸ್ಪೈಸೆಸ್ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮನೋಹರ ಮಸ್ಕಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಉತ್ತರ ಕರ್ನಾಟಕ ಜನರಿಗೆ ನಿಸರ್ಗದತ್ತವಾಗಿರುವ ಪರಿಶುದ್ಧ ನೀರಾವನ್ನು ಪೂರೈಸಲು ನಾವು ಸಿದ್ಧವಾಗಿದ್ದು, ತಹಶೀಲ್ದಾರ್ ಕಚೇರಿ ಎದುರಿನ ಪಾಲಿಕೆ ಕಾಂಪ್ಲೆಕ್ಸ್ನಲ್ಲಿ ಸುಪ್ರೀಂ ಹೆಸರಿನ ನೀರಾ ಪಾರ್ಲರ್ಅನ್ನು ಶಾಸಕ ಅರವಿಂದ ಬೆಲ್ಲದ ಉದ್ಘಾಟಿಸಲಿದ್ದಾರೆ.
ನಿತ್ಯ ಮಲೆನಾಡಿನಿಂದ ನೇರವಾಗಿ ನೀರಾ ನಗರಕ್ಕೆ ಬರಲಿದ್ದು, ಯಾವುದೇ ಪ್ರತೀಕೂಲ ಪರಿಣಾಮ ಆಗದಂತೆ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.