ಕರ್ನಾಟಕ

karnataka

ETV Bharat / state

ಅಗತ್ಯ ಸೇವೆಗಳಲ್ಲಿರುವವರು ಗುರುತಿನ ಚೀಟಿ ತೋರಿಸಿ: ಪೊಲೀಸ್ ಆಯುಕ್ತ ಆರ್. ದಿಲೀಪ್

ಅಗತ್ಯ ಸೇವೆಗಳಲ್ಲಿರುವವರು ಗುರುತಿನ ಚೀಟಿ ಪ್ರದರ್ಶಿಸುವುದು ಅವಶ್ಯಕವಾಗಿದೆ ಎಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಆರ್ ದಿಲೀಪ್ ಆದೇಶ ಹೊರಡಿಸಿದ್ದಾರೆ.

ಪೊಲೀಸ್ ಆಯುಕ್ತ ಆರ್ ದಿಲೀಪ್
ಪೊಲೀಸ್ ಆಯುಕ್ತ ಆರ್ ದಿಲೀಪ್

By

Published : Mar 25, 2020, 4:00 PM IST

ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದೇಶಾದಾದ್ಯಂತ 21 ದಿನಗಳ‌ ಕಾಲ ಲಾಕ್ ಡೌನ್ ಆದೇಶ ಹೊರಡಿಸಲಾಗಿದೆ. ಹಾಗಾಗಿ ಅಗತ್ಯ ಸೇವೆಗಳಲ್ಲಿರುವವರು ಗುರುತಿನ ಚೀಟಿ ಪ್ರದರ್ಶಿಸುವುದು ಅವಶ್ಯಕವಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಆರ್ ದಿಲೀಪ್ ಆದೇಶ ಹೊರಡಿಸಿದ್ದಾರೆ.

ಮಹಾನಗರಪಾಲಿಕೆ, ಆರೋಗ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ, ವಾರ್ತಾ, ಸಾರಿಗೆ, ಇಂಧನ ಸೇರಿದಂತೆ ವಿವಿಧ ಅಗತ್ಯ ಸೇವೆಗಳಲ್ಲಿ ಇರುವ ಇಲಾಖೆಗಳು ಹಾಗೂ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಗುರುತಿನ ಚೀಟಿಗಳನ್ನು ತೋರಿಸಿ ಕರ್ತವ್ಯದ ಸ್ಥಳಗಳಿಗೆ ತಲುಪಬಹುದು ಎಂದು ಸೂಚಿಸಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿ ಮತ್ತು ಆರೋಗ್ಯ ರಕ್ಷಣೆಗಾಗಿ ಪೊಲೀಸರು ಕೇಳಿದಾಗ ಕಾರ್ಡುಗಳನ್ನು ತೋರಿಸಿ ಸಹಕರಿಸಬೇಕು. ಕೊರೊನಾ ವೈರಾಣು ನಿರ್ಮೂಲನೆಗೆ ಕೈಜೋಡಿಸಬೇಕು ಇದೇ ವೇಳೆ ಅವರು ಮನವಿ ಮಾಡಿದ್ರು.

ABOUT THE AUTHOR

...view details