ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಾಯಿಗಳು ಬಂದ್ರೂ ಕೇಳೋರಿಲ್ಲ... ಇನ್ನು ಭದ್ರತೆ ಮಾತೆಲ್ಲಿ? - ವಾಣಿಜ್ಯ ನಗರಿ ಹುಬ್ಬಳ್ಳಿಗೆ ರೈಲ್ವೆ

ವಾಣಿಜ್ಯ ನಗರಿ ಹುಬ್ಬಳ್ಳಿಗೆ ರೈಲ್ವೆ ಪ್ರಮುಖ ‌ಸಂಚಾರಿ‌ ಕೊಂಡಿಯಾಗಿದೆ. ನಿತ್ಯ ಸಾವಿರಾರು ಜನರು ರೈಲ್ವೆ ಮೂಲಕವೇ ಹುಬ್ಬಳ್ಳಿಗೆ ಆಗಮಿಸುತ್ತಾರೆ. ಇಂತಹ ರೈಲು ‌ನಿಲ್ದಾಣದಲ್ಲಿ ಅಭದ್ರತೆ ಕಾಡುತ್ತಿದೆ.

ರೈಲ್ವೆ ನಿಲ್ದಾಣ
ರೈಲ್ವೆ ನಿಲ್ದಾಣ

By

Published : Feb 11, 2020, 5:29 PM IST

ಹುಬ್ಬಳ್ಳಿ: ನಗರದ ರೈಲ್ವೆ ನಿಲ್ದಾಣದಲ್ಲಿ ಕೆಲವು ದಿನಗಳ ಹಿಂದೆ ಸ್ಪೋಟಕ ವಸ್ತುವೊಂದು ಪತ್ತೆಯಾಗಿ ಜನರಲ್ಲಿ ಭಯವನ್ನುಂಟು ಮಾಡಿತ್ತು. ಇದರ ಬೆನ್ನಲ್ಲೇ ಭದ್ರತೆ ನಿಯೋಜನೆ ಮಾಡುವುದಾಗಿ ಕೂಡ ಅಧಿಕಾರಿಗಳು ತಿಳಿಸಿದ್ದರು. ಆದರೆ, ನಿಲ್ದಾಣದಲ್ಲಿ ಸೂಕ್ತ ಭದ್ರತೆ ಇಲ್ಲದೆ ನಾಯಿಗಳೆಲ್ಲ ರಾಜಾ ರೋಷವಾಗಿ ಓಡಾಡುತ್ತಿವೆ.

ರಾಜ್ಯ ಹಾಗೂ ದೇಶದೆಲ್ಲೆಡೆ ಸ್ಫೋಟಕ ವಸ್ತುಗಳ ಹಾಗೂ ಬಾಂಬ್ ಪತ್ತೆ ಪ್ರಕರಣಗಳು ನಡೆದರೂ ಕೂಡ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಭದ್ರತೆ ಬೇಕಿದೆ

ನೈಋತ್ಯ ರೈಲ್ವೆ ವಲಯದ ಕೇಂದ್ರ ಕಚೇರಿ ಹೊಂದಿರುವ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ, ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಏನಾದ್ರೂ ಅನಾಹುತಕಾರಿ ಘಟನೆಗಳು ನಡೆದ್ರೆ ಯಾರು ಹೊಣೆ ಎಂಬ ಪ್ರಶ್ನೆ ಕಾಡುತ್ತಿದೆ. ಇನ್ನು ಮುಂದಾದರೂ ಕೂಡ ರೈಲ್ವೆ ನಿಲ್ದಾಣದಲ್ಲಿ ಮೆಟಲ್ ಡಿಟೆಕ್ಟರ್ ನಂತಹ ಉಪಕರಣ ಅಳವಡಿಸುವುದರ ಜೊತೆಗೆ ಹೆಚ್ಚಿನ‌ ಭದ್ರತೆ ಒದಗಿಸಬೇಕಿದೆ.

ABOUT THE AUTHOR

...view details