ಕರ್ನಾಟಕ

karnataka

By

Published : Oct 30, 2020, 5:01 PM IST

Updated : Oct 30, 2020, 7:41 PM IST

ETV Bharat / state

ಮೈನವಿರೇಳಿಸಿದ NDRF ತಂಡದ ಅಣಕು ಪ್ರದರ್ಶನ

ಕಟ್ಟಡ ದುರಂತ ನಡೆದಾಗ ಅದರ ಅವಶೇಷಗಳಡಿ ಸಿಲುಕಿದ ಜನರನ್ನು ಯಾವ ರೀತಿ ರಕ್ಷಣೆ ಮಾಡಬೇಕು, ಕಟ್ಟಡದ ಮೇಲ್ಭಾಗದಲ್ಲಿ ಸಿಕ್ಕಿ ಹಾಕಿಕೊಂಡ ಜನರನ್ನು ರೋಪ್ ಮೂಲಕ ಯಾವ ರೀತಿ ಕೆಳಗೆ ಇಳಿಸಬೇಕು ಎಂಬುದರ ಕುರಿತು ಎನ್​​ಡಿಆರ್​ಎಫ್​ ತಂಡದವರು ಜನರಿಗೆ ತಮ್ಮ ಕಾರ್ಯವೈಖರಿ ಬಗ್ಗೆ ತಿಳಿಸಿಕೊಟ್ಟರು.

NDRF
ಎನ್​​ಡಿಆರ್​ಎಫ್​ ​ ತಂಡದ ಅಣುಕು ಪ್ರದರ್ಶನ

ಧಾರವಾಡ:ಎನ್​​ಡಿಆರ್​ಎಫ್​ ​ತಂಡವು ಕಟ್ಟಡ ದುರಂತ ನಡೆದಾಗ ಜನರನ್ನು ಹೇಗೆ ರಕ್ಷಿಸಬೇಕು ಎಂಬುದರ ಕುರಿತು ಅಣಕು ಪ್ರದರ್ಶನ ನಡೆಯಿತು.

ಜಿಲ್ಲಾಡಳಿತ ಹಾಗೂ ಹು-ಧಾ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಆವರಣದಲ್ಲಿ ಕಟ್ಟಡ ದುರಂತದ ಅಣಕು ಪ್ರದರ್ಶನ ಆಯೋಜಿಸಲಾಗಿತ್ತು. ಈ ಪ್ರದರ್ಶನವನ್ನು ಸ್ವತಃ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ, ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರು ಬಂದು ವೀಕ್ಷಿಸಿದರು.

ಎನ್​​ಡಿಆರ್​ಎಫ್​ ​ ತಂಡದ ಅಣುಕು ಪ್ರದರ್ಶನ

ಧಾರವಾಡದಲ್ಲಿ ಕಳೆದ ಬಾರಿ ಸಂಭವಿಸಿದ ದುರಂತ ಮುಂದೆಂದೂ ಆಗಬಾರದು, ಹಾಗೇನಾದರೂ ಆದಲ್ಲಿ ಯಾವ ರೀತಿ ಬೇಗ ಪ್ರತಿಕ್ರಿಯಿಸಬೇಕು ಎಂದು ಎನ್​​ಡಿಆರ್​ಎಫ್ (NDRF)​ ತಂಡದವರು ಮನವರಿಕೆ ಮಾಡಿಕೊಡಲು‌ ಜಿಲ್ಲಾಡಳಿತ ‌ಮುಂದಾಗಿದೆ.

ಇನ್ನೂ ಈ ಅಣಕು ಪ್ರದರ್ಶನದ ಬಗ್ಗೆ ಮಾಹಿತಿಯನ್ನು ಎನ್​​ಡಿಆರ್​ಎಫ್​ ತಂಡದ ಡೆಪ್ಯುಟಿ ಕಮಾಂಡೆಂಟ್ ಸುಖೇಂದ್ರ ದತ್ತಾ ನೀಡಿದರು. ರಾಷ್ಟ್ರಿಯ ವಿಪತ್ತು ನಿರ್ವಹಣಾ ತಂಡ, ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಈ ಅಣಕು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಎನ್​​ಡಿಆರ್​ಎಫ್​ ತಂಡದವರು ನಡೆಸಿದ ರಕ್ಷಣಾ ಕಾರ್ಯವನ್ನು ಧಾರವಾಡದ ಜನತೆ ನೋಡಿ ಕಣ್ತುಂಬಿಕೊಂಡರು.

Last Updated : Oct 30, 2020, 7:41 PM IST

ABOUT THE AUTHOR

...view details