ಕರ್ನಾಟಕ

karnataka

ETV Bharat / state

ಪುಡಿ ರೌಡಿಗಳ ಕಾಟ: ಈ ಠಾಣೆಯಿಂದ ವರ್ಗಾವಣೆ ಮಾಡುವಂತೆ ಪೊಲೀಸ್​ ಸಿಬ್ಬಂದಿ ಮನವಿ! - Navanagar police staff issue

ಪುಡಿ ರೌಡಿ ಹಾಗೂ ಪ್ರಭಾವಿ ವ್ಯಕ್ತಿಗಳ ಕಾಟದಿಂದ ಬೇಸತ್ತ ನವನಗರ ಠಾಣಾ ಪೊಲೀಸರು, ತಮ್ಮನ್ನು ಈ ಠಾಣೆಯಿಂದ ವರ್ಗಾವಣೆ ಮಾಡಿ ಎಂದು ತಮ್ಮ ಮನವಿ ಪತ್ರದ ಜೊತೆಗೆ ಓಡಾಡುತ್ತಿದ್ದ ದೃಶ್ಯ ಕಂಡು ಬಂತು.

Navanagar police staff appeal for transfer
ಮನವಿ ಪತ್ರದ ಜೊತೆಗೆ ಓಡಾಡುತ್ತಿರುವ ಪೊಲೀಸ್​ ಸಿಬ್ಬಂದಿ

By

Published : Nov 27, 2020, 9:24 PM IST

ಹುಬ್ಬಳ್ಳಿ:ನವನಗರ ಎಪಿಎಂಸಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ವಾತಾವರಣ ಸಂಪೂರ್ಣವಾಗಿ ಹದಗೆಟ್ಟಿದ್ದು, ಠಾಣೆಯಿಂದ ನಮಗೆ ಮುಕ್ತಿ ಕೊಡುವಂತೆ ಇಲ್ಲಿನ ಪೊಲೀಸ್​ ಸಿಬ್ಬಂದಿ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿದ್ದಾರೆ.

ಮನವಿ ಪತ್ರದ ಜೊತೆಗೆ ಓಡಾಡುತ್ತಿರುವ ಪೊಲೀಸ್​ ಸಿಬ್ಬಂದಿ

ಇದನ್ನೂ ಓದಿ:ವಕೀಲರ ಮೇಲೆ ಪೊಲೀಸರಿಂದ ಹಲ್ಲೆ ಆರೋಪ : ಧಾರವಾಡ ಬಾರ್ ಅಸೋಸಿಯೇಷನ್‌ನಿಂದ ಪ್ರತಿಭಟನೆ

ಈ ವ್ಯಾಪ್ತಿಯಲ್ಲಿ ಸದ್ಯಕ್ಕೆ ವಾತಾವರಣ ಸರಿ ಇಲ್ಲ. ಹಾಗಾಗಿ ನಮ್ಮನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಇಡೀ ಠಾಣೆಯ ಸಿಬ್ಬಂದಿ ಮನವಿ ಪತ್ರ ಹಿಡಿದುಕೊಂಡು ಓಡಾಡುತ್ತಿದ್ದ ದೃಶ್ಯ ಕಂಡು ಬಂತು.

ಮನವಿ ಪತ್ರದ ಜೊತೆಗೆ ಓಡಾಡುತ್ತಿರುವ ಪೊಲೀಸ್​ ಸಿಬ್ಬಂದಿ

ಇದನ್ನೂ ಓದಿ:ಕರ್ತವ್ಯ ನಿರತ ಪೊಲೀಸ್ ಇನ್ಸ್​ಪೆಕ್ಟರ್​ಗೆ ಅವಾಜ್ ಹಾಕಿದ ವಕೀಲ: ವಿಡಿಯೋ

ಕಳೆದ ರಾತ್ರಿ ರೌಡಿಶೀಟರ್ ಪ್ರವೀಣ ಪೂಜಾರಿ, ಕಾಂಗ್ರೆಸ್ ಮುಖಂಡ ಮಲ್ಲಯ್ಯ ಹಿರೇಮಠ ಹಾಗೂ ವಕೀಲರೊಬ್ಬರನ್ನು ಬಂಧಿಸಲಾಗಿದೆ. ಇದೀಗ ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಮೂವರು ವ್ಯಕ್ತಿಗಳ ಸಹಚರರಿಂದ ನವನಗರದಲ್ಲಿ ಹಲವು ಕಿರಿಕಿರಿ ಉಂಟಾಗಿದೆ. ಬಂಧಿತ ಮೂವರು ಪ್ರಭಾವಿ ವ್ಯಕ್ತಿಗಳಾಗಿದ್ದಾರೆ. ಇವರಿಂದಲೇ ಸಮಸ್ಯೆ ಉದ್ಭವಿಸುತ್ತಿದ್ದು, ನಮ್ಮ ಕಾರ್ಯನಿರ್ವಹಣೆ ಕಷ್ಟಕರವಾಗಿದೆ. ಹಾಗಾಗಿ ನಮ್ಮನ್ನು ಈ ಠಾಣೆಯಿಂದ ವರ್ಗಾವಣೆ ಮಾಡುವಂತೆ ಪಿಎಸ್​ಐ, ಎಎಸ್ಐ, ಹವಾಲ್ದಾರರು ಹಾಗೂ ಸಿಬ್ಬಂದಿ ತಮ್ಮ ಮನವಿ ಪ್ರತಿ ಹಿಡಿದುಕೊಂಡು ಓಡಾಡುತ್ತಿದ್ದ ದೃಶ್ಯ ಕಂಡು ಬಂತು.

ಮನವಿ ಪತ್ರದ ಜೊತೆಗೆ ಓಡಾಡುತ್ತಿರುವ ಪೊಲೀಸ್​ ಸಿಬ್ಬಂದಿ

ABOUT THE AUTHOR

...view details