ಧಾರವಾಡ: ನವಲಗುಂದ ರೈತ ಬಂಡಾಯದ ನೆಲ.ಭಾರತದಲ್ಲಿ ರೈತರಿಗೆ ವಿಶೇಷ ಗೌರವ ಇದೆ. ನಾವು ಭೂಮಿಯನ್ನು ಮಾತೃಭೂಮಿಯೆಂದು ಪೂಜಿಸುತ್ತೇವೆ.ಪ್ರತಿಯೊಬ್ಬರು ಮಾತೃಭೂಮಿಗೆ ನಮಿಸಬೇಕು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದರು. ಜಿಲ್ಲೆ ನವಲಗುಂದ ಪಟ್ಟಣದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಒಂದು ಕಡೆ ಮೋದಿ ಇದ್ದಾರೆ. ಇನ್ನೊಂದು ಕಡೆ ಗಾಂಧಿ ವಂಶಸ್ಥರ ಓರ್ವ ವ್ಯಕ್ತಿ ಇದ್ದಾನೆ. ಆ ವ್ಯಕ್ತಿ ವಿದೇಶದಲ್ಲಿ ದೇಶದ ಗೌರವ ಕಳೆಯುತ್ತಿದ್ದಾರೆ. ನಮ್ಮ ಮಾತೃಭೂಮಿಗೆ ಮಧ್ಯ ಪ್ರವೇಶಿಸಿ ಬನ್ನಿ ಎನ್ನುತ್ತಿದ್ದಾರೆ. ಅವರಿಗೆ ಜನರೇ ಬುದ್ಧಿ ಕಲಿಸಬೇಕಿದೆ ಎಂದು ಮನವಿ ಮಾಡಿದರು.
ಈ ನೆಲದಲ್ಲಿ ಕಾಂಗ್ರೆಸ್‌ರಿಗೆ ಒಂದು ಬೀದಿ ಪಕ್ಕದ ಜಾಗವೂ ಸಿಗಬಾರದು. ರಾಹುಲ್ ಗಾಂಧಿ ಸ್ವಲ್ಪ ಕೇಳಿ ನಾವು ಸತ್ತ ಮೇಲೆ ಗಂಗಾದಲ್ಲಿ ಹರಿಯುವ ನಮ್ಮ ಆಸ್ಥಿಗೆ ಕಿವಿಗೊಟ್ಟು ಕೇಳಿ, ಆಗಲೂ ನಿಮಗೆ ಭಾರತ ಮಾತಾಕಿ ಜೈ ಎಂಬ ಘೋಷಣೆಯೇ ಕೇಳುತ್ತದೆ ಎಂದು ಸವಾಲು ಹಾಕಿದರು. ಇನ್ನು ನವಲಗುಂದದಲ್ಲಿ ಬೃಹತ್ ರೋಡ್ ಯಾತ್ರೆ ನಡೆಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಬೃಹತ್ ಪೇರಲ್ ಹಣ್ಣಿನ ಹಾರ ಹಾಕಲಾಯಿತು. ಸಚಿವ ಗೋವಿಂದ ಕಾರಜೋಳ, ಸಿ ಸಿ ಪಾಟೀಲ್, ಶಂಕರ ಪಾಟೀಲ ಮುನೇನಕೊಪ್ಪ ಸಾಥ್ ನೀಡಿದರು.
ಗಂಟೆ ಕಾಯ್ದರೂ, ಸಿಎಂ ಭೇಟಿ ಸಿಗಲಿಲ್ಲ: ಶಾಸಕಿ ಅಸಮಾಧಾನತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದ ಕುರಿತು ಮಾತನಾಡಲು ಬುಧವಾರ ಕುಂದಗೋಳ ಕ್ಷೇತ್ರದ ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಬಂದಿದ್ದರು. ಸತತ ಒಂದೂವರೆ ಗಂಟೆಗಳ ಕಾಲ ಕಳೆದರೂ, ಕೂಡ ಬೊಮ್ಮಾಯಿ ಮಾತ್ರ ಭೇಟಿ ಮಾಡದೆ ತೆರಳಿರುವುದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.