ಕರ್ನಾಟಕ

karnataka

ETV Bharat / state

ಗೋಡ್ಸೆಯನ್ನು ಭಯೋತ್ಪಾದಕ ಅಂತಾ ಕರಿಯೋದ ಸರಿಯಲ್ಲ: ಪ್ರಸಾದ್​​ ಗೌಡ ಹೇಳಿಕೆ - undefined

ಸಮಾಜ ಸೇವೆ ಮಾಡಿದ್ದ ಗೋಡ್ಸೆಯನ್ನು ದೇಶದ್ರೋಹಿ ಅಂತಾ ಕರೆಯುವುದು ಎಷ್ಟರ ಮಟ್ಟಿಗೆ ಸರಿ. ಗೋಡ್ಸೆಯನ್ನು ದೇಶದ್ರೋಹಿ ಎನ್ನುವ ಹೇಳಿಕೆಗಳನ್ನು ನಾನು ಒಪ್ಪುವುದಿಲ್ಲ.

ಪ್ರಸಾದ್ ಗೌಡ

By

Published : May 20, 2019, 2:50 PM IST

ಹುಬ್ಬಳ್ಳಿ: ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ್ದ ನಾಥೂರಾಮ್ ಗೋಡ್ಸೆ ಅವರ ವೈಯಕ್ತಿಕ ಕಾರಣಗಳಿಂದ ಗಾಂಧೀಜಿಯವರನ್ನು ಹತ್ಯೆ ಮಾಡಿರಬಹುದು ಎಂದು ಹಿಂದೂ ಜನಜಾಗೃತಿ ಸಮನ್ವಯ ಸಮಿತಿಯ ಕಾರ್ಯದರ್ಶಿ ಪ್ರಸಾದ್ ಗೌಡ ಹೇಳಿಕೆ ನೀಡಿದ್ದಾರೆ.

ಹಿಂದೂ ಜನಜಾಗೃತಿ ಸಮನ್ವಯ ಸಮಿತಿಯ ಕಾರ್ಯದರ್ಶಿ ಪ್ರಸಾದ್ ಗೌಡ

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಥೂರಾಮ್ ಗೋಡ್ಸೆ ಬಗ್ಗೆ ದೇಶಾದ್ಯಂತ ಬಹುದೊಡ್ಡ ಚರ್ಚೆಯಾಗುತ್ತಿದೆ. ಆದ್ರೆ ಗೋಡ್ಸೆಯನ್ನು ಭಯೋತ್ಪಾದಕ ಅಂತಾ ಬಿಂಬಿಸುತ್ತಿರುವುದನ್ನು ನಾನು ಒಪ್ಪುವುದಿಲ್ಲ. ನಾಥೂರಾಮ್ ಗೋಡ್ಸೆ ಗಾಂಧೀಜಿಯವರನ್ನು ಹತ್ಯೆ ಮಾಡಲು ಹಿಂದಿನ ನಿಲುವು ಏನಾಗಿತ್ತು ಎಂಬುದು ಗೊತ್ತಿಲ್ಲ. ವೈಯಕ್ತಿಕ ಕಾರಣಗಳಿಂದ ಗಾಂಧಿಯವರ ಹತ್ಯೆ ಆಗಿರಬಹುದು.

ರಾಷ್ಟ್ರಕ್ಕಾಗಿ ಅವರು ಹಲವು ಕೆಲಸಗಳನ್ನು ಮಾಡಿದ್ದು, ಸಂಘಟನೆ ಕಾರ್ಯಕರ್ತ ಕೂಡಾ ಆಗಿದ್ದರು‌. ಸಮಾಜ ಸೇವೆ ಮಾಡಿದ್ದ ಗೋಡ್ಸೆಯನ್ನು ದೇಶದ್ರೋಹಿ ಅಂತಾ ಕರೆಯುವುದು ಎಷ್ಟರ ಮಟ್ಟಿಗೆ ಸರಿ? ಗೋಡ್ಸೆಯನ್ನು ದೇಶದ್ರೋಹಿ ಎನ್ನುವ ಹೇಳಿಗೆಗಳನ್ನು ನಾನು ಒಪ್ಪುವುದಿಲ್ಲ. 'ಆದರೆ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧಿಯವರ ಹತ್ಯೆಯನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.

For All Latest Updates

TAGGED:

ABOUT THE AUTHOR

...view details