ಹುಬ್ಬಳ್ಳಿ :ಅವಳಿನಗರದಲ್ಲಿರುವ 57 ಅನಧಿಕೃತ ಲೇಔಟ್ಗಳನ್ನು ಆದಷ್ಡು ಬೇಗ ತೆರವುಗೊಳಿಸಲಾಗುವುದು ಎಂದು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ಹೇಳಿದರು.
ಅವಳಿನಗರ ವ್ಯಾಪ್ತಿಯಲ್ಲಿನ 57 ಲೇಔಟ್ಗಳ ತೆರವು.. ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ
ಇದುವರೆಗೆ ನಗರಾಭಿವೃದ್ಧಿ ಪ್ರಾಧಿಕಾರ 34 ಹೊಸ ಲೇಔಟ್ಗಳನ್ನು ನಿರ್ಮಿಸಿದೆ. ಈ ಎಲ್ಲಾ ಲೇಔಟ್ಗಳಲ್ಲಿ ಒಟ್ಟು 14,863 ನಿವೇಶಗಳಿವೆ. ಅದರಲ್ಲಿ 14,020 ನಿವೇಶಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರಗಿ
ನಗರದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ 30 ಹಾಗೂ ಧಾರವಾಡದಲ್ಲಿ 27 ಹೊಸ ಅನಧಿಕೃತ ಲೇಔಟ್ಗಳನ್ನು ಗುರುತಿಸಲಾಗಿದೆ. ಈಗಾಗಲೇ ಲೇಔಟ್ ಮಾಲೀಕರಿಗೆ ಎರಡು ಬಾರಿ ನೋಟಿಸ್ ನೀಡಲಾಗಿದೆ. ಶೀಘ್ರವಾಗಿ ಈ ಲೇಔಟ್ಗಳನ್ನು ತೆರವುಗೊಳಿಸಲಾಗುವುದು ಎಂದರು.
ಇದುವರೆಗೆ ನಗರಾಭಿವೃದ್ಧಿ ಪ್ರಾಧಿಕಾರ 34 ಹೊಸ ಲೇಔಟ್ಗಳನ್ನು ನಿರ್ಮಿಸಿದೆ. ಈ ಎಲ್ಲಾ ಲೇಔಟ್ಗಳಲ್ಲಿ ಒಟ್ಟು 14,863 ನಿವೇಶಗಳಿವೆ. ಅದರಲ್ಲಿ 14,020 ನಿವೇಶಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಉಳಿದ 843 ನಿವೇಶಗಳನ್ನು ಇ-ಹರಾಜು ಮೂಲಕ ವಿತರಿಸಲಾಗುವುದು ಎಂದರು.